ಕರ್ನಾಟಕ

karnataka

By

Published : Jan 18, 2021, 10:14 AM IST

Updated : Jan 18, 2021, 10:20 AM IST

ETV Bharat / bharat

ಮೊರೆನಾ ನಕಲಿ ಮದ್ಯ ದುರಂತದ ಪ್ರಮುಖ ಆರೋಪಿ ಅಂದರ್.. ಸಾವಿನ ಸಂಖ್ಯೆ 25 ಕ್ಕೆ ಏರಿಕೆ

ಮಧ್ಯೆ ಪ್ರದೇಶದ ಮೊರೆನಾ ನಕಲಿ ಮದ್ಯದ ದುರಂತ ಪ್ರಕರಣದ ತನಿಖೆ ಚುರುಕುಗೊಂಡಿದೆ. ನಾವು ಇಂದು ಚೆನ್ನೈನಿಂದ ಮುಖ್ಯ ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆತನನ್ನೂ ಒಳಗೊಂಡಂತೆ ನಾವು ಈವರೆಗೆ ಐದು ಜನರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಪಾಂಡೆ ಹೇಳಿದ್ದಾರೆ.

Morena hooch tragedy
ಮೊರೆನಾ ನಕಲಿ ಮದ್ಯ ದುರಂತದ ಪ್ರಮುಖ ಆರೋಪಿ ಅಂದರ್

ಮೊರೆನಾ(ಮಧ್ಯೆ ಪ್ರದೇಶ): ಮೊರೆನಾ ನಕಲಿ ಮದ್ಯದ ದುರಂತದಲ್ಲಿ ಇಂದಿಗೆ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಮುಖೇಶ್ ಕಿರಾರ್ ಎಂದು ಗುರುತಿಸಲಾಗಿದ್ದು, ಆತನಿಗೆ 10,000 ರೂ. ದಂಡ ವಿಧಿಸಲಾಗಿದೆ.

ಮೊರೆನಾ ನಕಲಿ ಮದ್ಯದ ದುರಂತ ಪ್ರಕರಣದ ತನಿಖೆ ನಡೆಯುತ್ತಿದೆ. ನಾವು ಇಂದು ಚೆನ್ನೈನಿಂದ ಮುಖ್ಯ ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆತನನ್ನೂ ಒಳಗೊಂಡಂತೆ ನಾವು ಈವರೆಗೆ ಐದು ಜನರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಪಾಂಡೆ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಮತ್ತು ಅಬಕಾರಿ ಕಾಯ್ದೆಯ ಸೆಕ್ಷನ್ 34 ಮತ್ತು 91 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಏಳು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಐವರ ಹೆಡೆಮುರಿಕಟ್ಟಿದ್ದು ಉಳಿದ ಇಬ್ಬರಿಗಾಗಿ ಶೋಧಕಾರ್ಯ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಷಕಾರಿ ಮದ್ಯ ಸೇವನೆ ದುರಂತ: ಸಾವಿನ ಸಂಖ್ಯೆ 24ಕ್ಕೆ ಏರಿಕೆ

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ರಾಸಾಯನಿಕಗಳನ್ನು ಬಳಸಿ ನಕಲಿ ಮದ್ಯ ತಯಾರಿಸಿ ಹಳ್ಳಿಗಳ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯ ಮದ್ಯದ ಬಾಟಲಿಗಳನ್ನು ತೋಟವೊಂದರಿಂದ ವಶಪಡಿಸಿಕೊಂಡರು. ಅಲ್ಲಿ ಆರೋಪಿಗಳು ಕಳ್ಳಭಟ್ಟಿ ತಯಾರಿಸುತ್ತಿದ್ದರು ಎಂದಿದ್ದಾರೆ.

Last Updated : Jan 18, 2021, 10:20 AM IST

ABOUT THE AUTHOR

...view details