ಒಡಿಶಾ: ಇಲ್ಲಿನ ಪರದೀಪ್ ಬಂದರು ಪ್ರದೇಶದಲ್ಲಿ ಕಳ್ಳತನ ಆರೋಪದಡಿ ವ್ಯಕ್ತಿಯೊಬ್ಬನ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ್ದಲ್ಲದೇ ಟ್ರಕ್ಗೆ ಕಟ್ಟಿಹಾಕಿ ಹಿಂಸಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟ್ರಕ್ ಚಾಲಕ ಮತ್ತು ಸಹಾಯಕನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪರದೀಪ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
3-4 ದಿನಗಳ ಹಿಂದೆ ಈ ಘಟನೆ ನಡೆದಿದೆ. ಕೇಂದ್ರಪಾರ ಜಿಲ್ಲೆಯ ಮಾರ್ಷಘೈ ಪ್ರದೇಶದ ಈ ಯುವಕ, ತಮ್ಮ ಮೊಬೈಲ್ ಕದ್ದಿದ್ದಾನೆ ಎಂದು ಆರೋಪಿಸಿ ಟ್ರಕ್ ಚಾಲಕ ಮತ್ತು ಆತನ ಸಹಾಯಕರು ಯುವಕನನ್ನು ಕಟ್ಟಿಹಾಕಿ ಈ ರೀತಿ ಹಿಂಸಿಸಿದ್ದಾರೆ ಎಂಬ ಮಾಹಿತಿ ಇದೆ.