ತಿರುಪತಿ: ಕಬಡ್ಡಿ ಆಟ ನಡೆಯುತ್ತಿದ್ದ ವೇಳೆ ಎಸ್ಐವೊಬ್ಬರು ಎದುರಾಳಿ ತಂಡದ ಕಣಕ್ಕೆ ನುಗ್ಗಿದ್ದಾರೆ. ವಾಪಾಸ್ ತಮ್ಮ ಕಣಕ್ಕೆ ಬರುತ್ತಿದ್ದ ವೇಳೆ ಎಸ್ಐಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಲ್ಲಂಗುಂಟ ಗ್ರಾಮದಲ್ಲಿ ನಡೆದಿದೆ.
ಓದಿ:ಕಬಡ್ಡಿ ಕ್ರೀಡಾಕೂಟ : ಕೋರ್ಟಿಗಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು
ಅಂಬೇಡ್ಕರ್ ಜಯಂತಿಯಂದು ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಪಡಮರ ಪೊಲೀಸ್ ಠಾಣೆಯ ಎಂ. ಸುಬ್ರಹ್ಮಣ್ಯಂ (57) ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ವೇಳೆ ಎದುರಾಳಿ ಅಖಾಡಕ್ಕೆ ತೆರಳಿದ್ದಾರೆ. ಈ ವೇಳೆ ಅಖಾಡದಿಂದ ಹೊರ ಬರುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಓದಿ:ಟೂರ್ನಿಯ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನಿಗೆ ಗುಂಡಿಟ್ಟು ಹತ್ಯೆ
ಇನ್ಸ್ಪೆಕ್ಟರ್ರನ್ನು ನೆರೆದಿದ್ದ ಜನರು ಮತ್ತು ಆಟಗಾರರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು. ಆದ್ರೆ, ಇನ್ಸ್ಪೆಕ್ಟರ್ರನ್ನು ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. 1984ರಲ್ಲಿ ಪೊಲೀಸ್ ವೃತ್ತಿ ಜೀವನ ಆರಂಭಿಸಿದರು. ಇವರಿಗೆ 2019ರಲ್ಲಿ ಎಸ್ಐ ಆಗಿ ಬಡ್ತಿ ಸಿಕ್ಕಿತ್ತು. ಸುಬ್ರಹ್ಮಣ್ಯಂ ಹೆಂಡ್ತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.