ಕೊರ್ಬಾ (ಛತ್ತೀಸ್ಗಢ): ನಗರದ ರಾಂಪುರ ಹೊರಠಾಣೆ ವ್ಯಾಪ್ತಿಯಲ್ಲಿ 8 ತಿಂಗಳ ಹಿಂದೆ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರ ಆರಂಭಿಕ ತನಿಖೆಯಲ್ಲಿ ಪ್ರೇಮದ ವಿಷಯ ಬಯಲಿಗೆ ಬಂದಿತ್ತು. ತನಿಖೆಯಲ್ಲಿ ಪ್ರಗತಿಯಾಗುತ್ತಿದ್ದಂತೆ ದೊರೆತ ಸಾಕ್ಷ್ಯವು ಕಾಣೆಯಾದ ಹುಡುಗಿಯ ಗೆಳೆಯನ ಬಳಿಗೆ ಪೊಲೀಸರನ್ನು ಕರೆದೊಯ್ದಿತ್ತು.
ವಿಚಾರಣೆಯಲ್ಲಿ ತಿಳಿದುಬಂದ ನಿಜ ಸಂಗತಿ ಏನು?: ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಮದುವೆಯ ವಿಚಾರವಾಗಿ ಗೆಳತಿಯೊಂದಿಗೆ ಮಾತನಾಡುವಾಗ ಆಕೆಯನ್ನು ವೇಲ್ನಿಂದ ಕೊಲೆ ಮಾಡಿದ್ದೆ. ಮೃತದೇಹವನ್ನು ಕಾಡಿನಲ್ಲಿ ಮಣ್ಣು ಮಾಡಿದ್ದಾಗಿ ವಿವರಿಸಿದ್ದಾನೆ. ಪೊಲೀಸರು ನೆಲೆ ಅಗೆಸಿ ಆಕೆಯ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ. ಬಾಲಕಿಯ ಕುಟುಂಬ ಸದಸ್ಯರು ಕಾಲುಂಗುರದ ಆಧಾರದಲ್ಲಿ ಮಗಳನ್ನು ಗುರುತಿಸಿದ್ದಾರೆ.
ಪ್ರಕರಣದ ಮತ್ತಷ್ಟು ವಿವರ: ರಾಂಪುರ ಹೊರಠಾಣೆ ಸರಹದ್ದಿನಲ್ಲಿ ವಾಸಿಸುತ್ತಿದ್ದ 24 ವರ್ಷದ ಅಂಜು ಯಾದವ್ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿದ್ದಾಳೆಂದು ತಾಯಿ ರಾಂಪುರ ಚೌಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತೀಚೆಗೆ ನಾಪತ್ತೆಯಾಗಿರುವ ಅಂಜು ಅವರ ತಾಯಿ ಮತ್ತೆ ಎಸ್ಪಿಗೆ ದೂರು ನೀಡಿ, ಪತ್ತೆಗೆ ಮನವಿ ಮಾಡಿದ್ದರು. ಪೊಲೀಸರು ಮತ್ತೆ ಪ್ರಕರಣದ ತನಿಖೆ ಆರಂಭಿಸಿದ್ದರು. ಈ ಮೂಲಕ ಮಹತ್ವದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
ಕೊಲೆ ಆರೋಪಿ ಹೇಳಿದ್ದೇನು?: 8 ತಿಂಗಳ ಹಿಂದೆ ಮಗಳು ಅಂಜು ನಾಪತ್ತೆಯಾಗಿದ್ದಳು. ಈ ಬಗ್ಗೆ ಯುವತಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದಾಗ ಗೋಪಾಲ್ ಖಾಡಿಯಾ ಎಂಬಾತನೇ ಆರೋಪಿ ಎಂದು ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಮಾಹಿತಿ ನೀಡಿದರು.