ಜಮ್ಮು-ಕಾಶ್ಮೀರ:ಕಣಿವೆ ನಾಡಿನಲ್ಲಿ ಉಗ್ರರನ್ನು ತಟಸ್ಥಗೊಳಿಸುವ ಭದ್ರತಾ ಪಡೆಗಳ ಕೆಲಸ ಮುಂದುವರೆದಿದೆ. ಶ್ರೀನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಶ್ರೀನಗರದಲ್ಲಿ ಮೂವರು ಉಗ್ರರ ಹತ್ಯೆಗೈದ ಭದ್ರತಾ ಪಡೆ - ಜಮ್ಮು-ಕಾಶ್ಮೀರ
ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಶ್ರೀನಗರದಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಮೂವರು ಉಗ್ರರ ಖೇಲ್ ಖತಂ
ಶ್ರೀನಗರದ ರಾಮ್‌ಭಾಗ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ಇನ್ನೂ ಕೆಲವು ಉಗ್ರರು ಘಟನಾ ಪ್ರದೇಶದಲ್ಲಿ ಅಡಗಿರುವ ಶಂಕೆ ಇದೆ. ಭದ್ರತಾ ಪಡೆಗಳು ಕೂಂಬಿಂಗ್ ಮುಂದುವರೆಸಿವೆ.
ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.