ಕರ್ನಾಟಕ

karnataka

ಮಾವೋವಾದಿಗಳ ಬಾಂಬ್​ ದಾಳಿ ವಿಫಲಗೊಳಿಸಿದ ಒಡಿಶಾ ಪೊಲೀಸರು

ಮೂಲಗಳ ಪ್ರಕಾರ, ಪೊಲೀಸರು ಆ ಪ್ರದೇಶದಲ್ಲಿ ದಿನನಿತ್ಯದ ಕೂಂಬಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇತುವೆಯ ಬಳಿ ಬರುತ್ತಿದ್ದರಂತೆ. ಅದನ್ನೇ ಗುರುಯಾಗಿಸಿಕೊಂಡ ಮಾವೋವಾದಿಗಳು ಟಿಫಿನ್ ಬಾಕ್ಸ್ ​ಬಾಂಬ್​ ಇಟ್ಟಿದ್ದಾರೆ..

By

Published : Feb 20, 2022, 3:47 PM IST

Published : Feb 20, 2022, 3:47 PM IST

Odisha cops thwart Maoist attack, recover tiffin-bomb in Rayagada
Odisha cops thwart Maoist attack, recover tiffin-bomb in Rayagada

ರಾಯಗಡ(ಒಡಿಶಾ) :ಪಂಚಾಯತ್‌ ಚುನಾವಣೆಯ 3ನೇ ಹಂತದ ಮತದಾನದ ದಿನದಂದು ಭಾರೀ ಅನಾಹುತಗಳೇ ಸಂಭವಿಸುತ್ತಿವೆ. ರಾಯಗಡ ಪ್ರದೇಶದ ನಿಯಮಗಿರಿ ಪ್ರದೇಶದಲ್ಲಿ ಜೀವಂತ ಟಿಫಿನ್ ಬಾಕ್ಸ್ ಬಾಂಬ್‌ಗಳನ್ನು ವಶಪಡಿಸಿಕೊಂಡ ನಂತರ ಮಾವೋವಾದಿಗಳ ಪ್ರಮುಖ ದಾಳಿಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ನಿಯಮಗಿರಿ ಪ್ರದೇಶದ ಸೇತುವೆಯ ಬಳಿ ಕಾರ್ಯಾಚರಣೆ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ಮಾವೋವಾದಿಗಳ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಇದನ್ನೂ ಓದಿ:ಮತಪೆಟ್ಟಿಗೆ ಲೂಟಿ : ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ

ಪೊಲೀಸರು ಆ ಪ್ರದೇಶದಲ್ಲಿ ದಿನನಿತ್ಯದ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು. ಇದನ್ನು ಗುರಿಯಾಗಿಸಿಕೊಂಡ ಮಾವೋವಾದಿಗಳು ಸೇತುವೆಯ ಬಳಿ ಟಿಫಿನ್ ಬಾಕ್ಸ್ ಬಾಂಬ್‌ಗಳನ್ನು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಶೋಧ ಕಾರ್ಯಾಚರಣೆ ನಡೆಸಿ ನಂತರ ಬಾಂಬ್ ನಿಷ್ಕ್ರಿಯ ದಳಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

For All Latest Updates

ABOUT THE AUTHOR

...view details