ಕೋಯಿಕ್ಕೋಡ್ (ಕೇರಳ): ಬಾಲಕಿಯರ ನಾಪತ್ತೆ ಪ್ರಕರಣ ಸಂಬಂಧ ಆರು ಹುಡುಗಿಯರ ಪೈಕಿ ಮತ್ತೊಬ್ಬ ಬಾಲಕಿ ರಾಜ್ಯದ ಮಂಡ್ಯದಲ್ಲಿ ಪತ್ತೆಯಾಗಿದ್ದಾಳೆ. ನಿನ್ನೆಯಷ್ಟೇ ಓರ್ವ ಬಾಲಕಿ ಬೆಂಗಳೂರಿನಲ್ಲಿ ಸಿಕ್ಕಿದ್ದಳು.
ಪ್ರಕರಣದ ಹಿನ್ನೆಲೆ:ಗಣರಾಜ್ಯೋತ್ಸವ ದಿನದಂದು ಕೇರಳದ ಕೋಯಿಕ್ಕೋಡ್ನಲ್ಲಿರುವ ಸರ್ಕಾರಿ ಚಿಲ್ಡ್ರನ್ ಹೋಂನಿಂದ 15 ರಿಂದ 17 ವರ್ಷದೊಳಗಿನ ಒಟ್ಟು ಆರು ಬಾಲಕಿಯರು ಅಲ್ಲಿಂದ ನಾಪತ್ತೆಯಾಗಿದ್ದರು. ಆದರೆ, ತನಿಖೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಏಕೆಂದರೆ ಇವರನ್ನು ಯಾರೋ ಅಪಹರಣ ಮಾಡಿರಲಿಲ್ಲ. ಬದಲಾಗಿ ಇವರೇ ಅಲ್ಲಿಂದ ಎಸ್ಕೇಪ್ ಆಗಿದ್ದರು.
ಈ ಹುಡುಗಿಯರು ಗಣರಾಜ್ಯೋತ್ಸವದ ನಿಮಿತ್ತ, ಕಾರ್ಯಕ್ರಮ ನಡೆಯುವ ವೇಳೆ ಏಣಿ ಸಹಾಯದಿಂದ ಚಿಲ್ಡ್ರನ್ ಹೋಂ ಅಡುಗೆ ಮನೆಯ ಗೋಡೆ ಹತ್ತಿ ಪರಾರಿಯಾಗಿದ್ದರು. ಅಲ್ಲಿಂದ ರೈಲಿನ ಮೂಲಕ ಗುರುವಾರ (ಜನವರಿ 27) ಮಧ್ಯಾಹ್ನ ಬೆಂಗಳೂರಿಗೆ ಬಂದು ಇಬ್ಬರು ಯುವಕರ ಸಹಾಯದಿಂದ ಮಡಿವಾಳದ ಹೋಟೆಲ್ವೊಂದರಲ್ಲಿ ತಂಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ತಮ್ಮ ಮೊಬೈಲ್ ಪೋನ್ಗಳು ಕಳ್ಳತನವಾಗಿದೆ, ನಮ್ಮ ಬಳಿ ಬೇರೆ ಐಡಿ ಕಾರ್ಡ್ಗಳು ಇಲ್ಲ ಎಂದು ಹೋಟೆಲ್ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾರೆ.
ಅಷ್ಟರಲ್ಲಾಗಲೇ ಬಾಲಕಿಯರು ಬೆಂಗಳೂರು ತಲುಪಿರುವುದಾಗಿ ಕೇರಳ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಹೀಗಾಗಿ ಕೇರಳದ ಆರು ಹುಡುಗಿಯರು ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಎಲ್ಲ ಹೋಟೆಲ್ಗಳಿಗೆ ಕರೆ ಮಾಡಿ ಮಲಯಾಳಿ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ.
ಹೀಗಾಗಿ ಅನುಮಾನಗೊಂಡ ಮಡಿವಾಳದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಹಾಗೂ ಮಲಯಾಳಿ ಅಸೋಸಿಯೇಷನ್ಗೆ ಕರೆ ಮಾಡಿ ತಮ್ಮ ಹೋಟೆಲ್ಗೆ ಆರು ಹುಡುಗಿಯರು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೋಟೆಲ್ನ ಭದ್ರತಾ ಸಿಬ್ಬಂದಿ ಗೇಟ್ ಅನ್ನು ಮುಚ್ಚಿದ್ದಾರೆ.