ಜಬಲ್ಪುರ, ಮಧ್ಯಪ್ರದೇಶ: ಜಸುಜಾ ನಗರದ ಧನ್ವಂತ್ರಿ ನಗರದ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿ ಸಂಜೀವನಿ ನಗರ ಠಾಣೆಯ ಪೊಲೀಸರು ವೇಶ್ಯಾವಾಟಿಕೆ ದಂಧೆ ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ, ಮಗ, ಸೊಸೆ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೊಸೆ ಮಗ ತಂದೆಯಿಂದ ನಡೀತಿತ್ತು ಹೈಟೆಕ್ ವೇಶ್ಯಾವಾಟಿಕೆ: ಗೋರಖ್‌ಪುರ ಪೊಲೀಸ್ ಅಧಿಕಾರಿ ಪ್ರತಿಷ್ಠಾ ರಾಥೋಡ್ ಹೇಳಿಕೆ ಪ್ರಕಾರ, ಧನ್ವಂತ್ರಿ ನಗರದ ಜಸುಜಾ ಸಿಟಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದರ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಈ ಪ್ರಕರಣ ಭೇದಿಸಲು ನಾವು ನಮ್ಮ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಗ್ರಾಹಕರನ್ನಾಗಿ ಕಳುಹಿಸಿದ್ದೆವು. ಈ ವೇಳೆ, ಪೊಲೀಸ್ ಸಿಬ್ಬಂದಿ ಮನೆಯೊಳಗೆ ಹೋದಾಗ, ಹಾಸಿಗೆಯಲ್ಲಿ ಆರೋಪಿ ಕೃಷ್ಣ ಕುಮಾರ್ ದುಬೆ, ಅವರ ಮಗ ಸುನೀಲ್ ಕುಮಾರ್ ದುಬೆ, ಸೊಸೆ ಮತ್ತು ಇತರ ಮೂವರು ಅವರೊಂದಿಗೆ ಕುಳಿತಿದ್ದರು ಎಂದರು.
ಸಾವಿರ ರೂಪಾಯಿಗೆ ಯುವತಿ ಫಿಕ್ಸ್:ಕೃಷ್ಣ ಕುಮಾರ್ ದುಬೆ ಜೊತೆ ಪೊಲೀಸ್ ಸಿಬ್ಬಂದಿ ವ್ಯವಹಾರ ಕುದಿಸಿದ್ದಾರೆ. ಸಾವಿರ ರೂಪಾಯಿಗೆ ಯುವತಿ ಫಿಕ್ಸ್ ಆಗಿದ್ದಳು. ಬಳಿಕ ಪೊಲೀಸ್ ಸಿಬ್ಬಂದಿಗೆ ಕೋಣೆಯೊಳಗೆ ಹೋಗುವಂತೆ ಸೂಚಿಸಿದ್ದಾರೆ. ಯೋಜನೆ ಪ್ರಕಾರ ಪೊಲೀಸ್ ಸಿಬ್ಬಂದಿ ರೂಂನೊಳಗೆ ಹೋದಾಗ ತಮ್ಮ ಜೊತೆಗೆ ಬಂದಿದ್ದ ಪೊಲೀಸ್ ತಂಡಕ್ಕೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದ ತಂಡವು ತಕ್ಷಣವೇ ದಾಳಿ ಮಾಡಿದೆ. ಈ ವೇಳೆ ಇಬ್ಬರು ಹುಡುಗಿಯರು ಮತ್ತು ಇಬ್ಬರು ಯುವಕರು ವಿವಿಧ ಕೊಠಡಿಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.