ಹೈದರಾಬಾದ್:ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ, ವೈಎಸ್ಆರ್ಟಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಕುಳಿತಿದ್ದ ಕಾರನ್ನೇ ಕ್ರೇನ್ ಸಹಾಯದಿಂದ ಎಳೆದುಕೊಂಡು ಹೋದ ಘಟನೆ ಇಂದು ನಡೆಯಿತು.
ವೈಎಸ್ ಶರ್ಮಿಳಾ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರು ಅವರಿದ್ದ ಕಾರನ್ನೇ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಅವರ ಕಾರನ್ನು ಎಳೆದುಕೊಂಡು (ಟೋಯಿಂಗ್) ಹೋಗುತ್ತಿದ್ದರೂ ಕೆಳಗಿಳಿಯದೇ ಅದರಲ್ಲೇ ಕುಳಿತಿದ್ದರು.