ನವದೆಹಲಿ:ರಾಜಸ್ಥಾನದ ಆಳ್ವಾರ್ ಮೂಲದ ಕಾನ್ಸ್ಟೇಬಲ್ ಓರ್ವ ತನ್ನ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಹೈಕೋರ್ಟ್ನ ಗೇಟ್ ಸಂಖ್ಯೆ 3ರ ಬಳಿ ನಡೆದಿದೆ.
ಮೂಲಗಳ ಪ್ರಕಾರ ಕಾನ್ಸ್ಟೇಬಲ್ 30 ವರ್ಷದವನಾಗಿದ್ದು, ರಾಜಸ್ಥಾನದ ಸಶಸ್ತ್ರ ಪೊಲೀಸ್ ವಿಭಾಗಕ್ಕೆ ಸೇರಿದ್ದಾನೆ. ಈತನನ್ನು ಹೈಕೋರ್ಟ್ನ ಭದ್ರತೆಗೆ ನೇಮಕ ಮಾಡಲಾಗಿತ್ತು. ಬುಧವಾರ ಬೆಳಗ್ಗೆ 9.30ಕ್ಕೆ ನ್ಯಾಯಾಲಯದ ಆವರಣದ ಹೊರಗೆ ತನ್ನ ರೈಫಲ್ನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪ್ರಾಥಮಿಕ ವರದಿ ಹೇಳಿದೆ.