ಕರ್ನೂಲ್(ಆಂಧ್ರಪ್ರದೇಶ):ಆರೆಂಜ್ ಟ್ರಾವೆಲ್ಸ್ನಲ್ಲಿ ಅಪಾರ ಪ್ರಮಾಣದ ಚಿನ್ನ, ವಜ್ರ ಹಾಗೂ ಮುತ್ತು ಸೇರಿದಂತೆ ನಗದು ಹಣ ವಶಕ್ಕೆ ಪಡೆದುಕೊಳ್ಳುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೆಂಜ್ ಬಸ್ನಲ್ಲಿ 1 ಕೆಜಿ ಚಿನ್ನ, 60 ಲಕ್ಷದ ವಜ್ರ ಸೇರಿ 1.04 ಕೋಟಿ ಮೌಲ್ಯದ ವಸ್ತು ಜಪ್ತಿ! - ಆರೆಂಜ್ ಟ್ರಾವೆಲ್ಸ್ನಲ್ಲಿ ಅಪಾರ ಪ್ರಮಾಣದ ಚಿನ್ನ ವಶ
ಹೈದರಾಬಾದ್ನಿಂದ ತಮಿಳುನಾಡಿನ ಮಧುರೈಗೆ ತೆರಳುತ್ತಿದ್ದ ಬಸ್ವೊಂದರಲ್ಲಿ ಅಪಾರ ಪ್ರಮಾಣದ ಮುತ್ತು, ಚಿನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ನ ಪಂಚ ಲಿಂಗಾಲಾ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಬಸ್ನಲ್ಲಿ ಈ ವಸ್ತುಗಳು ಸಿಕ್ಕಿದ್ದು, ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಬಸ್ ಹೈದರಾಬಾದ್ನಿಂದ ತಮಿಳುನಾಡಿನ ಮಧುರೈಗೆ ತೆರಳುತ್ತಿತ್ತು. ಬಸ್ನಲ್ಲಿ ತಪಾಸಣೆ ನಡೆಸಿದಾಗ 518 ಗ್ರಾಂನ 22 ಕ್ಯಾರೆಟ್ ಬಂಗಾರ ಹಾಗೂ 579 ಗ್ರಾಂ 18 ಕ್ಯಾರೆಟ್ನ ಬಂಗಾರ, 60.54 ಲಕ್ಷ ರೂ ಮೌಲ್ಯದ ವಜ್ರ ಹಾಗೂ 27 ಸಾವಿರ ರೂ. ಮೌಲ್ಯದ ಮುತ್ತು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ 1.04 ಕೋಟಿ ರೂ. ಎಂದು ತಿಳಿದು ಬಂದಿದೆ.