ಪಾಟ್ನಾ: ಪೊಲೀಸರು ಕರ್ತವ್ಯನಿರತರಾಗಿರುವಾಗ ಮೊಬೈಲ್ ಅಥವಾ ಇನ್ನಿತರ ಯಾವುದೇ ಗ್ಯಾಜೆಟ್ ಉಪಯೋಗಿಸಕೂಡದೆಂದು ಬಿಹಾರ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಪೊಲೀಸರಿಗೆ ಆದೇಶ ನೀಡಿದ್ದಾರೆ. ಈ ಹೊಸ ಆದೇಶ ಪಾಲಿಸದಿದ್ದರೆ ಅದನ್ನು ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಹಾಗೂ ನಿಯಮ ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಡ್ಯೂಟಿಯಲ್ಲಿರುವಾಗ ಮೊಬೈಲ್ ಬಳಕೆಯಿಂದ ಪೊಲೀಸರ ಗಮನ ಬೇರೆಡೆ ಹೋಗುತ್ತದೆ. ಇದರಿಂದ ಅವರ ಕಾರ್ಯಕ್ಷಮತೆಯು ಕುಗ್ಗುತ್ತದೆ ಎಂದು ಡಿಜಿಪಿ ಎಸ್.ಕೆ. ಸಿಂಘಾಲ್ ಅಭಿಪ್ರಾಯ ಪಟ್ಟಿದ್ದಾರೆ.