ನವದೆಹಲಿ:ಇತ್ತೀಚೆಗೆ ವಿಮಾನದಲ್ಲಿ ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದೆ ಪ್ರಯಾಣಿಕರ ಮೇಲೆ ಸಹ ಪ್ರಯಾಣಿಕರೇ ಮೂತ್ರ ವಿರ್ಸಜನೆ ಮಾಡಿರುವ ಮತ್ತು ಕುಡಿದು ಗಲಾಟೆ ಮಾಡಿದಂತಹ ದುರ್ವರ್ತನೆಗಳು ವರದಿಯಾಗಿದ್ದವು. ಅಲ್ಲದೇ, ವಿಮಾನಯಾನ ಸಿಬ್ಬಂದಿಯೇ ಚಿನ್ನ, ಮಾದಕ ವಸ್ತು ಸಾಗಾಟದಲ್ಲಿ ಸಿಕ್ಕಿಬಿದ್ದ ಘಟನೆಗಳು ನಡೆದಿದ್ದವು. ಇದೀಗ ಕಾರ್ಗೋ ವಿಮಾನದಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಇಬ್ಬರು ನೌಕರರನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹೌದು, ದೆಹಲಿ-ಮುಂಬೈ ನಡುವಿನ ಸರಕು ವಿಮಾನದಲ್ಲಿ ಮೊಬೈಲ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳು ಕಳವು ಮಾಡಿರುವುದು ಪತ್ತೆಯಾಗಿದೆ. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುತ್ತಿದ್ದ QO321 ವಿಮಾನದಲ್ಲಿ ಈ ಕಳ್ಳತನ ನಡೆದಿದೆ. ಈ ಕುರಿತು ಮಾರ್ಚ್ 30ರಂದು ವಿಮಾನಯಾನ ಕಂಪನಿಯವರು ವಿಮಾನ ನಿಲ್ದಾಣದ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿಗಳು:ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ವಿಮಾನಯಾನ ಕಂಪನಿಯವರು ತಮ್ಮದೇ ಆದ ಮಟ್ಟದಲ್ಲಿ ಮೊದಲಿಗೆ ತನಿಖೆ ನಡೆಸಿದ್ದಾರೆ. ಈ ಘಟನೆ ನಡೆದ ದಿನ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ವಿಚಾರಿಸಿದ್ದಾರೆ. ಆಗ ಪ್ರದೀಪ್ ಎಂಬ ಉದ್ಯೋಗಿ ಕಳ್ಳತನವನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ನಂತರದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ ಪೊಲೀಸ್ ವಶಕ್ಕೆ