ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಅರೆಸ್ಟ್ - ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಪ್ರಾಪ್ತೆಯನ್ನು ಅಪಹರಿಸಿರುವ ನಾಲ್ವರು ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ramnagar crime news
ramnagar crime news

By

Published : Sep 29, 2021, 3:02 PM IST

ರಾಮನಗರ(ಉತ್ತರಾಖಂಡ್):ಅಪ್ರಾಪ್ತೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉತ್ತರಾಖಂಡದ ರಾಮನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಕಾಮುಕರು ಕೆಲವು ದಿನಗಳ ಹಿಂದೆ ಬಾಲಕಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದರು. ಅಲ್ಲಿಂದ ಮನೆಗೆ ವಾಪಸ್​ ಬಂದಿರುವ ಸಂತ್ರಸ್ತೆ ಪೋಷಕರ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಇದಾದ ಬಳಿಕ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅತ್ಯಾಚಾರವೆಸಗಿದ ಕಾಮುಕರ ಬಂಧನ

ಶಮ್ಸುಲ್​ ಹಕ್​, ಮೊಹಮ್ಮದ್​​ ಶರೀಫ್​ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್​​ 363, 366 ಎ, 376 ಎ, 313, 323, 504 ಮತ್ತು 3/4 ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ರಾಮನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:15ರ ಬಾಲಕಿ ಮೇಲೆ ಗ್ಯಾಂಗ್​ರೇಪ್​, ಸಿಗರೇಟ್​ನಿಂದ ಎದೆ ಸುಟ್ಟು, ಕೊಲೆ ; ಮರಕ್ಕೆ ಮೃತದೇಹ ನೇಣು

ಕಳೆದ ಕೆಲ ದಿನಗಳಿಂದ ದೇಶದ ವಿವಿಧೆಡೆ ಅಪ್ರಾಪ್ತೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ನಿನ್ನೆಯಷ್ಟೇ ಮಧ್ಯಪ್ರದೇಶದ ಸಿಧಿಯಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಕಾಮುಕರು, ಆಕೆಯ ಎದೆಯ ಭಾಗಕ್ಕೆ ಅಮಾನುಷವಾಗಿ ಸಿಗರೇಟ್​ನಿಂದ ಸುಟ್ಟು, ತದನಂತರ ಕೊಲೆಗೈದಿದ್ದರು. ಅಷ್ಟೇ ಅಲ್ಲ, ಮೃತದೇಹವನ್ನು ಮರಕ್ಕೆ ನೇತು ಹಾಕಿ ಕ್ರೌರ್ಯ ಮೆರೆದಿದ್ದರು.

ABOUT THE AUTHOR

...view details