ತೆಂಕಶಿ (ತಮಿಳುನಾಡು) : ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಕೊಲೆ ಯತ್ನದ ಆರೋಪಿಯೊಬ್ಬ ಪೊಲೀಸರಿಗೆ ಹೆದರಲಿ ನದಿಯಂತೆ ಇರುವ ಪ್ರದೇಶದಲ್ಲಿ ಅವಿತಿದ್ದ. ಆರೋಪಿಯ ಅವಿತಿದ್ದ ತಾಣದ ಬಗ್ಗೆ ಪೊಲೀಸರು ತಿಳಿದಿದ್ದರು. ವಿಶಾಲವಾಗಿರುವ ಸರೋವರದಲ್ಲಿ ಆರೋಪಿಯನ್ನು ಹಿಡಿಯುವುದು ಕಷ್ಟಕರವಾಗಿತ್ತು. ಆದರೆ ಈ ಕೆಲಸವನ್ನು ಡ್ರೋನ್ ಸಹಾಯದಿಂದ ಸುಲಭವಾಗಿಯೇ ಮಾಡಿದ್ದಾರೆ.
ಏನಿದು ಘಟನೆ:ರೌಡಿ ಶೀಟರ್ಜಕುಲ್ ಹಮೀದ್ ತೆಂಕಶಿ ಜಿಲ್ಲೆಯವನು. ಈತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಕೊಲೆ ಯತ್ನ ಪ್ರಕರಣದಲ್ಲಿ ಜಕುಲ್ ಹಮೀದ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆ ತೆಂಕಶಿಯ ಪಾಚನಾಯಕನಪೊಟ್ಟೈ ಪ್ರದೇಶಕ್ಕೆ ಜಾಕುಲ್ ತೆರಳಿ ವಾಸ್ತವ್ಯ ಹೂಡಿದ್ದ.
ಓದಿ:ಕೆಜಿಎಫ್ ಸಿನಿಮಾ ದಾಖಲೆಯನ್ನ ಮುರಿದ ಜೇಮ್ಸ್ ಸಿನಿಮಾ!
ಜಕುಲ್ ಪಾಚನಾಯಕನಪೊಟ್ಟೈ ಪ್ರದೇಶದ ಸುತ್ತ - ಮುತ್ತ ವಾಸಿಸುವ ಜನರಿಗೆ ಇಲ್ಲಿಗೆ ಬರಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ಆದರೆ, ಇಲ್ಲಿನ ನಿವಾಸಿ ಪೀರ್ ಮೊಹಮ್ಮದ್ ಕುರಿ ಕಾಯುತ್ತಿದ್ದ ವೇಳೆ ಜಕುಲ್ ಇರುವ ಸ್ಥಳದ ಕಡೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಜಾಕುಲ್, ಮೊಹಮ್ಮದ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಮೊಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ಬಗ್ಗೆ ತೆಂಕಶಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.