ಪಠಾಣ್‌ಕೋಟ್:ಸಾಮಾಜಿಕ ಜಾಲತಾಣಗಳ ಮೂಲಕ ಗಡಿ ಪ್ರದೇಶಗಳ ಗುಪ್ತಚರ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ, ವ್ಯಕ್ತಿಯೊಬ್ಬನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯಿಂದ ಹಲವು ಮಹತ್ವದ ಮಾಹಿತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯ ವಿರುದ್ಧ ಗೂಢಚರ್ಯೆ ಸೇರಿದಂತೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಫಟ್ಟೋಚಕ್ ನರೋತ್ ಜೈಮಲ್ ಸಿಂಗ್ ಗ್ರಾಮದ ಜಗದೀಶ್ ಸಿಂಗ್ ಅಲಿಯಾಸ್ ಜಗ್ಗ ಎಂದು ಗುರುತಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನರೋತ್ ಜೈಮಲ್ ಸಿಂಗ್, ಭಾರತ-ಪಾಕ್ ಗಡಿ ಸಮೀಪದ ಹಳ್ಳಿಯೊಂದರ ನಿವಾಸಿಯಾಗಿದ್ದಾನೆ. ಅಲ್ಲದೇ ಆಗಾಗ್ಗೆ ಆತನ ಮೊಬೈಲ್‌ನಿಂದ ಪಾಕಿಸ್ತಾನದ ಕೆಲವು ಸಂಖ್ಯೆಗಳಿಗೆ ಕರೆ ಮಾಡಲಾಗಿದೆ. ಇದಲ್ಲದೇ, ಹೇಳಲಾದ ವ್ಯಕ್ತಿ, ತನ್ನ ಇತರ ಸಹಚರರೊಂದಿಗೆ, ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದಲ್ಲಿ ಕುಳಿತುಕೊಂಡು ಜನರೊಂದಿಗೆ ಭಾರತದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.