ಮೊಹಾಲಿ(ಪಂಜಾಬ್): ಮೂರು ದಿನಗಳ ಹಿಂದೆ ಸೇಬು ಟ್ರಕ್ಕೊಂದನ್ನು ಪಂಜಾಬ್ ಜನರು ಲೂಟಿ ಮಾಡಿರುವ ಘಟನೆ ಘತೇಘರ್ ಸಹಾನ್ ಎಂಬಲ್ಲಿ ನಡೆದಿತ್ತು. ಇದೀಗ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ನಾವು ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಸೇಬಿನ ಮಾಲೀಕರಿಗೆ 9 ಲಕ್ಷದ 12 ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ. ಅಷ್ಟೂ ಮೊತ್ತದ ಚೆಕ್ ಅನ್ನು ಪಂಜಾಬಿನ ಸಾಮಾಜಿಕ ಕಾರ್ಯಕರ್ತರು ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಸೇಬು ಕಳ್ಳತನದ ವಿಡಿಯೋ ನೋಡಿ ನಾವೇ ಬೆಚ್ಚಿಬಿದ್ದೆವು. ನಮ್ಮ ಪಂಜಾಬಿನಲ್ಲಿ ಈ ರೀತಿಯ ಜನರಿದ್ದಾರೆ ಎಂದು ತಿಳಿದಿರಲಿಲ್ಲ. ಇದು ನಮ್ಮ ಗೌರವ, ಪ್ರತಿಷ್ಠೆಗೆ ಧಕ್ಕೆ ತಂದಿದೆ. ಹೀಗಾಗಿ ಮಾಲೀಕರಿಗೆ ನಾವೇ ಸಹಾಯ ಮಾಡಲು ನಿರ್ಧರಿಸಿ, ಅವರಿಗೆ ಚೆಕ್ ನೀಡಿದ್ದೇವೆ ಎಂದು ಪಂಜಾಬಿನ ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.
ಈ ಬಗ್ಗೆ ಸೇಬು ಮಾಲೀಕ ಖುಷಿ ವ್ಯಕ್ತಪಡಿಸಿದರು. ನನ್ನ ಟ್ರಕ್ ಡ್ರೈವರ್ ನನಗೆ ಕರೆ ಮಾಡಿ ಸೇಬು ಕಳ್ಳತನವಾಗಿದೆ ಎಂದಾಗ ನಂಬಲಾಗಲಿಲ್ಲ. ಈ ರೀತಿಯ ಜನರು ಪಂಜಾಬಿನಲ್ಲಿದ್ದಾರೆಯೇ ಎಂಬುದೇ ನನಗೆ ಆಶ್ಚರ್ಯವಾಗಿತ್ತು. ಆದರೆ ಇದೀಗ ಅವರೇ ಬಂದು ನಷ್ಟ ಪರಿಹಾರ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಸಹಾಯ ಮಾಡಿದ ಕಾರ್ಯಕರ್ತರನ್ನು ಶ್ರೀ ಫತೇಘರ್ ಸಾಹೇಬ್ ಅಲ್ಲಿನ ವಕೀಲರು ವಿಶೇಷ ರೀತಿಯಲ್ಲಿ ಸನ್ಮಾನಿಸಿದರು.
ಇದನ್ನೂ ಓದಿ:ಲಂಚ ಪ್ರಕರಣ: ರೈಲ್ವೆ ಉಪ ಮುಖ್ಯ ಇಂಜಿನಿಯರ್ನ ಬಂಧನ.. 2 ಕೋಟಿ ರೂ ವಶಕ್ಕೆ