ರೂರ್ಕಿ( ಉತ್ತರಾಖಂಡ್):ಇಲ್ಲಿನ ಔಷಧ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದ್ದು, ಏಳು ಜನ ಕಾರ್ಮಿಕರು ಅಸ್ವಸ್ಥರಾಗಿದ್ದರು. ಹರಿದ್ವಾರ ಜಿಲ್ಲೆಯ ಭಗವಾನ್‌ಪುರ ಪ್ರದೇಶದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಅನೇಕ ಕಾರ್ಮಿಕರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅವರನ್ನು ಭಗವಾನ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ರೂರ್ಕಿಯ ಭಗವಾನ್‌ಪುರ ಪ್ರದೇಶದ ಶಿವಾಲಿಕ್ ರೆಮಿಡೀಸ್ ಕಂಪನಿಯಲ್ಲಿ ಐಪಿಎ ಡ್ರಮ್ ತೆರೆಯುವಾಗ, ವಿಷಕಾರಿ ಅನಿಲ ಸೋರಿಕೆಯಾಗಿದೆ. ಇದರಿಂದ ಏಳಕ್ಕೂ ಹೆಚ್ಚು ಕಾರ್ಮಿಕರ ಸ್ಥಿತಿ ಹದಗೆಟ್ಟಿತ್ತು. ಎಲ್ಲ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.