ಕರ್ನಾಟಕ

karnataka

ETV Bharat / bharat

ಕವಿ ಸುಬ್ರಮಣ್ಯ ಭಾರತಿ ಪುಣ್ಯಸ್ಮರಣೆಯನ್ನು ‘ಮಹಾಕವಿ ದಿನ’ವನ್ನಾಗಿ ಘೋಷಿಸಿದ ಸಿಎಂ ಸ್ಟಾಲಿನ್​

ಖ್ಯಾತ ಕವಿ ಸುಬ್ರಮಣ್ಯ ಭಾರತಿ ಪುಣ್ಯಸ್ಮರಣೆಯ ದಿನವನ್ನು ‘ಮಹಾಕವಿ ದಿನ’ವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಜೊತೆಗೆ ಅವರ ಕೃತಿಗಳ ಒಟ್ಟುಗೂಡಿಸಿ ಪ್ರಬಂಧ ಸಂಕಲನ ಹೊರತಂದು ಶಾಲಾ ಮಕ್ಕಳಿಗೆ ವಿತರಿಸಲು ಮುಂದಾಗಿದೆ.

poet-subramania-bharatis-death-anniversary-declared-as-mahakavi-day-in-tamil-nadu
ಸುಬ್ರಮಣ್ಯ ಭಾರತಿ ಪುಣ್ಯಸ್ಮರಣೆ

By

Published : Sep 11, 2021, 12:34 PM IST

ಚೆನ್ನೈ (ತಮಿಳುನಾಡು): ಸ್ವಾತಂತ್ರ್ಯ ಹೋರಾಟಗಾರ ಹಾಗೂ ಖ್ಯಾತ ಕವಿ ಸುಬ್ರಮಣ್ಯ ಭಾರತಿ ಪುಣ್ಯಸ್ಮರಣೆಯ ದಿನವನ್ನು ‘ಮಹಾಕವಿ ದಿನ’ವನ್ನಾಗಿ ಆಚರಿಸಿವುದಾಗಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ.

ಇಂದು ಅವರ 100ನೇ ಪುಣ್ಯಸ್ಮರಣೆಯಾಗಿದ್ದು, ಅವರ ಕೃತಿಗಳು ದೇಶಭಕ್ತಿಯನ್ನು ಹುಟ್ಟುಹಾಕಿವೆ ಮತ್ತು ತಮಿಳು ಸಾಹಿತ್ಯದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಮುಂದಿನ ಒಂದು ವರ್ಷದವರೆಗೆ ಇಲ್ಲಿನ ಭಾರತೀಯಾರ್ ಸ್ಮಾರಕ ಭವನದಲ್ಲಿ ಸಾಪ್ತಾಹಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.

ರಾಜ್ಯ ಮಟ್ಟದ ಕವಿತೆ ಸ್ಪರ್ಧೆ ಏರ್ಪಡಿಸಲಾಗುವುದು ಉತ್ತಮ ಕವಿತೆ ಬರೆದ ಓರ್ವ ಪುರುಷ ಹಾಗೂ ಮಹಿಳೆಗೆ 1 ಲಕ್ಷ ನಗದು ಸೇರಿ ‘ಭಾರತಿ ಯುವ ಕವಿ ಪ್ರಶಸ್ತಿ’ ನೀಡಲಾಗುವುದು ಎಂದಿದ್ದಾರೆ.

ಸುಬ್ರಹ್ಮಣ್ಯ ಭಾರತಿ ಅವರ ಕವನಗಳು ಮತ್ತು ಪ್ರಬಂಧಗಳ ಸಂಕಲನವನ್ನು ‘ಮನತಿಲ್ ಉರಿತಿ ವೆಂಡಮ್’ ಎಂಬ ಪುಸ್ತಕದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹೊರತಂದಿದ್ದು, 37 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದಿದ್ದಾರೆ. ಅಲ್ಲದೇ ಅವರ ಕವಿತೆಗಳನ್ನ ಇಂಗ್ಲಿಷ್​ ಭಾಷೆಗೆ ಭಾಷಾಂತರಿಸಲಾಗುವುದು ಎಂದಿದ್ದಾರೆ.

ಓದಿ:ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ದಂಡು

ABOUT THE AUTHOR

...view details