ಕರ್ನಾಟಕ

karnataka

ETV Bharat / bharat

ಕವಿ ಮುನವ್ವರ್ ರಾಣಾ ಮಗಳು ಪೊಲೀಸ್ ವಶಕ್ಕೆ... - ಕವಿ ಮುನಾವ್ವರ್ ರಾಣಾ ಪುತ್ರಿ ಉರುಸಾ ರಾಣಾ

ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ನೇತೃತ್ವದ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಕವಿ ಮುನವ್ವರ್ ರಾಣಾ ಅವರ ಪುತ್ರಿ ಮತ್ತು ಕಾಂಗ್ರೆಸ್ ಮುಖಂಡೆ ಉರುಸಾ ರಾಣಾ ಹಾಗೂ ಅನೇಕ ಪ್ರತಿಭಟನಾಕಾರರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

poet-munawwar-ranas-daughter-taken-into-police-custody
ಕವಿ ಮುನಾವ್ವರ್ ರಾಣಾ ಮಗಳು ಪೊಲೀಸ್ ವಶಕ್ಕೆ...

By

Published : Nov 5, 2020, 3:42 PM IST

ಲಖನೌ:ಪರಿವರ್ತನ್ ಚೌಕ್‌ನಲ್ಲಿ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಕವಿ ಮುನವ್ವರ್ ರಾಣಾ ಅವರ ಪುತ್ರಿ ಮತ್ತು ಕಾಂಗ್ರೆಸ್ ಮುಖಂಡೆ ಉರುಸಾ ರಾಣಾ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ನೇತೃತ್ವದ ಪ್ರದರ್ಶನವು ಉತ್ತರ ಪ್ರದೇಶ ಸರ್ಕಾರದ ವಿರುದ್ಧವಾಗಿತ್ತು. ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧಿತವಾಗಿತ್ತು.

ಪರಿವರ್ತನ್ ಚೌಕ್‌ನಲ್ಲಿ ನಿಯೋಜಿಸಲಾಗಿರುವ ಭಾರಿ ಪೊಲೀಸ್ ಪಡೆ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸುವುದನ್ನು ತಡೆಯಿತು. ಜೊತೆಗೆ ಅನೇಕ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿತು.

ABOUT THE AUTHOR

...view details