ಕರ್ನಾಟಕ

karnataka

ETV Bharat / bharat

ದಲಿತ ಕವಿ ದಿ. ಸಿದ್ದಲಿಂಗಯ್ಯ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ - Padma Awards

ಗಣರಾಜ್ಯೋತ್ಸವದ ಮುನ್ನಾದಿನವಾದ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ರಾಜ್ಯದ ಐವರಿಗೆ ಪದ್ಮಶ್ರೀ ಒಲಿದುಬಂದಿದೆ.

Govt announces Padma Awards 2022
Govt announces Padma Awards 2022

By

Published : Jan 25, 2022, 9:00 PM IST

ಹೈದರಾಬಾದ್​:2022ರ ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ನಾಲ್ವರು ಸಾಧಕರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ ಹಾಗೂ 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರಮುಖವಾಗಿ ಕರ್ನಾಟಕದ ಐವರು ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದವರು

  • ಸುಬ್ಬಣ್ಣ ಅಯ್ಯಪ್ಪನ್(ವಿಜ್ಞಾನ ಮತ್ತು ಎಂಜಿನಿಯರಿಂಗ್)
  • ಎಚ್​.ಆರ್​​. ಕೇಶವಮೂರ್ತಿ(ಕಲೆ)
  • ಅಬ್ದುಲ್ ಖಾದರ್​ ನಡಕಟ್ಟಿ(ಕೃಷಿ ಸಂಶೋಧಕರು)
  • ಅಮಾಯಿ ಮಹಾಲಿಂಗ ನಾಯ್ಕ್(ಕೃಷಿ ಕ್ಷೇತ್ರದ ಸಾಧನೆ)
  • ದಲಿತ ಕವಿ, ಸಾಹಿತಿ ದಿ. ಡಾ. ಸಿದ್ದಲಿಂಗಯ್ಯ (ಕಲಾ ವಿಭಾಗ,ಮರಣೋತ್ತರ)

ಇದನ್ನೂ ಓದಿರಿ:2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ.. ಕರ್ನಾಟಕದ ಐವರು ಸಾಧಕರಿಗೆ ಒಲಿದ ಗೌರವ

ಕರ್ನಾಟಕದ ಐವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಘೋಷಿಸಲಾಗಿದ್ದು, ಉಳಿದಂತೆ ಪದ್ಮವಿಭೂಷಣ ಮತ್ತು ಪದ್ಮಭೂಷಣ ವಿಭಾಗದಲ್ಲಿ ಯಾವುದೇ ರೀತಿಯ ಪ್ರಶಸ್ತಿ ಒಲಿದು ಬಂದಿಲ್ಲ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details