ಕರ್ನಾಟಕ

karnataka

ETV Bharat / bharat

ಮೋದಿಗೆ ಭದ್ರತಾ ಲೋಪ: ನಾಳೆ ಸುಪ್ರೀಂನಲ್ಲಿ ಸಿಜೆಐ ನೇತೃತ್ವದ ಪೀಠದಿಂದ ಕೇಸ್​ ವಿಚಾರಣೆ - Supreme Court to hear security breach matter

PMs Security Breach CJI led bench to hear matter: ಹಿರಿಯ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಸಂಬಂಧ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ನಾಳೆ ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.

PMs Security Breach CJI led bench to hear matter on Friday
ಮೋದಿಗೆ ಭದ್ರತಾ ಲೋಪ

By

Published : Jan 6, 2022, 12:27 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಪ್ರಕರಣದ ವಿಚಾರಣೆಯನ್ನು ನಾಳೆ ಶುಕ್ರವಾರ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​​.ವಿ. ರಮಣ ನೇತೃತ್ವದ ಪೀಠ ಕೈಗೆತ್ತಿಕೊಳ್ಳಲಿದೆ.

ಘಟನೆ ಸಂಬಂಧ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಮತ್ತು ಈ ರೀತಿಯ ಉಲ್ಲಂಘನೆ ಇನ್ಮುಂದೆ ನಡೆಯಬಾರದು ಎಂದು ಹಿರಿಯ ವಕೀಲ ಮಣಿಂದರ್ ಸಿಂಗ್ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸುವುದಾಗಿ ಸಿಜೆಐ ತಿಳಿಸಿದ್ದಾರೆ. ಅಲ್ಲದೇ ತಮ್ಮ ಅರ್ಜಿಯ ಪ್ರತಿಯನ್ನು ಪಂಜಾಬ್​ ರಾಜ್ಯ ಸರ್ಕಾರಕ್ಕೂ ಸಲ್ಲಿಸುವಂತೆ ಮಣಿಂದರ್ ಸಿಂಗ್​ಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ನಿನ್ನೆ ಪಂಜಾಬ್​ನ ಫಿರೋಜ್‌ಪುರದಲ್ಲಿ ಆಯೋಜನೆಗೊಂಡಿದ್ದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕೆಲ ಪ್ರತಿಭಟನಾಕಾರರು ರಸ್ತೆಯನ್ನು ಅಡ್ಡಗಟ್ಟಿದ್ದರು. ಈ ವೇಳೆ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಫ್ಲೈಓವರ್​ನಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಬಳಿಕ ರ್‍ಯಾಲಿಯಲ್ಲಿ ಭಾಗಿಯಾಗದೇ ಪ್ರಧಾನಿ ದೆಹಲಿಗೆ ವಾಪಸ್​ ಆಗಿದ್ದರು.

ಇದನ್ನೂ ಓದಿ: Modi Security Breach: ಬ್ಲೂ ಬುಕ್ ಪಾಲಿಸಿಲ್ಲ ಎಂದ ಅಧಿಕಾರಿ.. ಕಾರ್ಯಕರ್ತರಿಗೆ ಥಳಿಸಿ, ಊಟದ ಬಾಕ್ಸ್ ಕಸಿದರು ಎಂದ ಸಂಸದೆ

ದೇಶದ ಪ್ರಧಾನಿಗೆ ಭದ್ರತಾ ಲೋಪವಾಗಿದೆ ಎಂದು ದೇಶಾದ್ಯಂತ ಬಿಜೆಪಿ ನಾಯಕರು ಪಂಜಾಬ್​ನ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಘಟನೆ ಸಂಬಂಧ ತನಿಖೆ ನಡೆಸಲು ಪಂಜಾಬ್ ಸರ್ಕಾರ ಕೂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ABOUT THE AUTHOR

...view details