ನವದೆಹಲಿ: ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಅದರಲ್ಲೂ ಶರವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆಗೆ ಪ್ರಮುಖ ಫಾರ್ಮಾ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ.
ರೆಮ್ಡೆಸಿವಿರ್ನ ಕೊರತೆ ಕಾರಣಕ್ಕೆ ಈ ಸಭೆ ಮಹತ್ವ ಪಡೆದುಕೊಂಡಿದೆ. ಇದು ಆಸ್ಪತ್ರೆಗೆ ಅಗತ್ಯವಿರುವ ಹಾಗೂ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಯುಎಸ್ಎಫ್‌ಡಿಎಯಿಂದ ಸಂಪೂರ್ಣವಾಗಿ ಅನುಮೋದಿಸಲ್ಪಟ್ಟ ಮೊದಲ ಮತ್ತು ಏಕೈಕ ಆಂಟಿ-ವೈರಲ್ ಔಷಧವಾಗಿದೆ.
ಇನ್ನು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಹಾಗೂ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಯೋಜನಗೆಗಳ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಔಷಧಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಶನಿವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮೋದಿ ಮಾತನಾಡಿದ್ದರು.
ಈ ಸಭೆಯಲ್ಲಿ ಮಾತನಾಡಿದ ಮೋದಿ, ಭಾರತದ ಔಷಧೀಯ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಹಾಗೆ ರೆಮ್ಡೆಸಿವಿರ್ ಮತ್ತು ಇತರ ಔಷಧಗಳ ಪೂರೈಕೆಯ ಸ್ಥಿತಿಯನ್ನು ಅವರು ಪರಿಶೀಲಿಸಿದದ್ದಾರೆ ಎಂದು ಸರ್ಕಾರದ ಪ್ರಕಟಣೆ ಮೂಲಕ ತಿಳಿಸಿದೆ.