ಕರ್ನಾಟಕ

karnataka

By

Published : Nov 15, 2021, 11:02 AM IST

ETV Bharat / bharat

ಜಂಜಾಟಿಯ ಗೌರವ್ ದಿವಸ್ ಮಹಾಸಮ್ಮೇಳನ: ಹಲವು ಕಾರ್ಯಕ್ರಮ ಉದ್ಘಾಟಿಸಲಿರುವ ಪಿಎಂ ಮೋದಿ

ಮಧ್ಯಪ್ರದೇಶದ ಭೋಪಾಲ್‌ನ ಜಾಂಬೂರಿ ಮೈದಾನದಲ್ಲಿ ಸೋಮವಾರದಂದು (ಇಂದು) ನಡೆಯಲಿರುವ ಜಂಜಾಟಿಯ ಗೌರವ್ ದಿವಸ್ ಮಹಾಸಮ್ಮೇಳನದಲ್ಲಿ (Janjatiya Gaurav Diwas Mahasammelan) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಭಾಗವಹಿಸಲಿದ್ದಾರೆ ಎಂದು ಪಿಎಂಒ (PMO) ಪ್ರಕಟಣೆ ಮೂಲಕ ತಿಳಿಸಿದೆ.

Prime Minister Narendra Modi  Janjatiya Gaurav Diwas Mahasammelan  janjatiya community  Madhya Pradesh  ಪ್ರಧಾನಿ ನರೇಂದ್ರ ಮೋದಿ  ಜಂಜಾಟಿಯ ಗೌರವ್ ದಿವಸ್ ಮಹಾಸಮ್ಮೇಳ  ಜಂಜಾಟಿಯ ಸಮುದಾಯ  ಮಧ್ಯಪ್ರದೇಶದ ಭೋಪಾಲ್‌
ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರದೇಶದ ಭೋಪಾಲ್‌ನ ಜಾಂಬೂರಿ ಮೈದಾನದಲ್ಲಿ ಇಂದು ನಡೆಯಲಿರುವ ಜಂಜಾಟಿಯ ಗೌರವ್ ದಿವಸ್ ಮಹಾಸಮ್ಮೇಳನದಲ್ಲಿ (Janjatiya Gaurav Diwas Mahasammelan) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆಯಲಿರುವ ಅಮರ್ ಶಹೀದ್ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಸಂಭ್ರಮದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಕ್ರಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ‘ರೇಷನ್​ ಆಪ್ಕೆ ಗ್ರಾಮ್’ (Ration Aapke Gram) ಎಂಬ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಪಿಡಿಎಸ್ ಪಡಿತರ (PDS Ration) ಮಾಸಿಕ ಕೋಟಾವನ್ನು ಪ್ರತಿ ತಿಂಗಳು ಅವರ ಸ್ವಂತ ಹಳ್ಳಿಗಳಲ್ಲಿನ ಜಂಜಾಟಿಯ ಸಮುದಾಯದಿಂದ (janjatiya community) ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಫಲಾನುಭವಿಗಳು ತಮ್ಮ ಪಡಿತರವನ್ನು ಪಡೆಯಲು ನ್ಯಾಯಬೆಲೆ ಅಂಗಡಿಗೆ ತೆರಳಬೇಕಾಗಿಲ್ಲ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ.

ಅನೇಕ ಸಮಸ್ಯೆಗಳಿಗೆ ಪರಿಹಾರದ ನಿಟ್ಟಿಯಲ್ಲಿ ಕಾರ್ಯಕ್ರಮ

ಮಧ್ಯಪ್ರದೇಶದ ಜಂಜಾಟಿಯ ಸಮುದಾಯದವರು ರಕ್ತಹೀನತೆ (sickle cell anaemia), ಥಲಸ್ಸೆಮಿಯಾ (Thalassemia) ಮತ್ತು ಹಿಮೋಗ್ಲೋಬಿನೋಪತಿಗಳ (Hemoglobinopathies) ಸೇರಿದಂತೆ ಅನೇಕ ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಶ್ರಮಿಸುತ್ತಿದ್ದು, ಜೆನೆಟಿಕ್ ಕೌನ್ಸೆಲಿಂಗ್ ಕಾರ್ಡ್‌ಗಳನ್ನು ಹಸ್ತಾಂತರಿಸುವ ಮೂಲಕ ಮಧ್ಯಪ್ರದೇಶದ ಸಿಕಲ್ ಸೆಲ್ (Hemoglobinopathy) ಮಿಷನ್ ಅನ್ನು ಪ್ರಾರಂಭಿಸಲಿದ್ದಾರೆ.

ಮಹಾಸಮ್ಮೇಳನದ ಸಮಯದಲ್ಲಿ ಮಧ್ಯಪ್ರದೇಶದ ಸಿಕಲ್ ಸೆಲ್ (Hemoglobinopathy) ಮಿಷನ್‌ ಪ್ರಾರಂಭಿಸುವ ಮೂಲಕ ಪ್ರಧಾನ ಮಂತ್ರಿಗಳು ಫಲಾನುಭವಿಗಳಿಗೆ ಜೆನೆಟಿಕ್ ಕೌನ್ಸೆಲಿಂಗ್ ಕಾರ್ಡ್‌ಗಳನ್ನು ಹಸ್ತಾಂತರಿಸಲಿದ್ದಾರೆ. ರಕ್ತಹೀನತೆ, ಥಲಸ್ಸೆಮಿಯಾ ಬಳಲುತ್ತಿರುವ ರೋಗಿಗಳನ್ನು ಪರೀಕ್ಷಿಸಲು ಮತ್ತು ರೋಗ ನಿರ್ವಹಿಸಲು ಈ ಮಿಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ಪಿಎಂಒ (PMO) ಹೇಳಿದೆ.

ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತ್ರಿಪುರಾ ಸೇರಿದಂತೆ ದಮನ್ ಮತ್ತು ದಿಯು (Andhra Pradesh, Chhattisgarh, Jharkhand, Madhya Pradesh, Maharashtra, Odisha, Daman and Diu) ಸೇರಿದಂತೆ ದೇಶಾದ್ಯಂತ 50 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪಿಎಂಒ (PMO) ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಣಿ ಕಮಲಪತಿ ರೈಲು ನಿಲ್ದಾಣ ಉದ್ಘಾಟನೆ

ಪ್ರಧಾನಿ ಅವರು ಜಂಜಾಟಿಯ ಸ್ವ-ಸಹಾಯ ಗುಂಪುಗಳು (Janjatiya self-help groups) ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಧ್ಯಪ್ರದೇಶದ ಜಂಜಾಟಿಯ ಸಮುದಾಯದಿಂದ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟದ ವೀರರ ಛಾಯಾಚಿತ್ರ ಪ್ರದರ್ಶನವನ್ನು ಸಹ ನಡೆಸಲಿದ್ದಾರೆ. ಮೋದಿ ಅವರು ಮರು ಅಭಿವೃದ್ಧಿಪಡಿಸಿದ ರಾಣಿ ಕಮಲಪತಿ ರೈಲು ನಿಲ್ದಾಣವನ್ನು (Rani Kamlapati Railway Station) ಉದ್ಘಾಟಿಸಲಿದ್ದಾರೆ ಮತ್ತು ಮಧ್ಯಪ್ರದೇಶದಲ್ಲಿ ರೈಲ್ವೆಯ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಲಿದ್ದಾರೆ ಎಂದು ಪಿಎಂಒ (PMO) ಹೇಳಿದೆ.

ಗಣ್ಯರ ಉಪಸ್ಥಿತಿ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್, ಕೇಂದ್ರ ಸಚಿವರಾದ ಡಾ ವೀರೇಂದ್ರ ಕುಮಾರ್, ನರೇಂದ್ರ ಸಿಂಗ್ ತೋಮರ್ ಮತ್ತು ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕೇಂದ್ರ ರಾಜ್ಯ ಸಚಿವರಾದ ಪ್ರಹ್ಲಾದ್ ಎಸ್ ಪಟೇಲ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಡಾ ಎಲ್ ಮುರುಗನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ABOUT THE AUTHOR

...view details