ಫಿರೋಜ್ಪುರ್(ಪಂಜಾಬ್):ಪಂಜಾಬ್ನ ಫಿರೋಜ್ಪುರ್ನಲ್ಲಿ ಚುನಾವಣಾ ಪ್ರಚಾರ ನಡೆಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಭದ್ರತಾ ಲೋಪದಿಂದಾಗಿ ದಿಢೀರ್ ಆಗಿ ರ್‍ಯಾಲಿ ರದ್ದುಗೊಳಿಸಿದ್ದಾರೆ.
15-20 ನಿಮಿಷಗಳ ಕಾಲ ಫ್ಲೈಓವರ್ನಲ್ಲಿ ಸಿಲುಕೊಂಡ ನಮೋ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ದೊಡ್ಡ ಮಟ್ಟದ ಲೋಪ ಕಂಡು ಬಂದಿರುವ ಕಾರಣ ದಿಢೀರ್ ಆಗಿ ರ್‍ಯಾಲಿ ರದ್ಧುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.
ಫ್ಲೈಓವರ್ನಲ್ಲಿ ಸಿಲುಕಿಕೊಂಡ ನಮೋ
ಸಂಪೂರ್ಣ ವಿವರ:
ಪಂಜಾಬ್ನ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಬಟಿಂಡಾಗೆ ಬಂದಿಳಿದಿದ್ದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಅವರು ಸ್ಥಳಕ್ಕೆ ತೆರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಅದು ಸಾಧ್ಯವಾಗಿಲ್ಲ. ಹೀಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದು ಫ್ಲೈಓವರ್ನಲ್ಲಿ ಪ್ರಧಾನಿ ಸಿಲುಕಿಕೊಂಡರು.
ಫ್ಲೈಓವರ್ ಮೇಲೆ ಪ್ರತಿಭಟನೆ ನಡೆಸಿದ ರೈತರು
ಪಂಜಾಬ್ ಕಾಂಗ್ರೆಸ್ ವಿರುದ್ಧ ಕೇಂದ್ರ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಸ್ ಆಗಿದ್ದು, ಕೇಂದ್ರ ಗೃಹ ಸಚಿವಾಲಯ ಪಂಜಾಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಭದ್ರತೆ ಲೋಪವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದಿಂದ ವಿವರವಾದ ವರದಿ ಕೇಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಿಎಂ ಚನ್ನಿ ವಿರುದ್ಧ ನಡ್ಡಾ ವಾಗ್ದಾಳಿ
ಸಾವಿರಾರು ಕೋಟಿ ರೂ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ತೆರಳುತ್ತಿದ್ದ ಪ್ರಧಾನಿ ರ್‍ಯಾಲಿಗೆ ಅಡ್ಡಿಪಡಿಸಲಾಗಿದ್ದು, ಅಲ್ಲಿನ ಜನರು ಸಭೆಯಲ್ಲಿ ಭಾಗಿಯಾಗದಂತೆ ತಡೆಯಲು ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸಲು ನಿರಾಕರಿಸಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆರೋಪಿಸಿದ್ದಾರೆ.