ಶ್ರೀನಗರ: ಭಯೋತ್ಪಾದಕರ ಉದ್ದೇಶಿತ ಹತ್ಯೆಗಳ ಹೆಚ್ಚಳ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಮತ್ತೊಂದು ಸುತ್ತಿನ ನಿರ್ಗಮನವನ್ನು ಪ್ರಚೋದಿಸಿದೆ. ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿ ಕೆಲಸ ಮಾಡುತ್ತಿದ್ದ ಹಲವಾರು ಸರ್ಕಾರಿ ನೌಕರರು ಜಮ್ಮು ತಲುಪಿದ ನಂತರ ಕಾಶ್ಮೀರದಲ್ಲಿನ ಹದಗೆಟ್ಟ ಪರಿಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.
ಪಿಎಂ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಕಣಿವೆಯಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಗುರುವಾರ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಮತ್ತು ಬಿಹಾರದ ವಲಸೆ ಕಾರ್ಮಿಕನ ಹತ್ಯೆಯನ್ನು ಉಲ್ಲೇಖಿಸಿದ ಅವರು, ಅನೇಕ ಕುಟುಂಬಗಳು ಕಾಶ್ಮೀರವನ್ನು ತೊರೆದು ಇಂದು ಜಮ್ಮುವಿಗೆ ತಲುಪಿದ್ದಾರೆ ಎಂದು ಕೌಲ್ ಹೇಳಿದ್ದಾರೆ.