ಕರ್ನಾಟಕ

karnataka

ETV Bharat / bharat

ಹೊಸ ಸಂಸತ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದ ಪ್ರಧಾನಿ - unveiled bronze National Emblem

ದೇಶದ ನೂತನ ಸಂಸತ್​​ ಕಟ್ಟಡದ ಛಾವಣಿಯ ಮೇಲೆ 6.5 ಮೀಟರ್‌ ಉದ್ದದ ಕಂಚಿನ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಅನಾವರಣಗೊಳಿಸಿದರು.

PM Narendra Modi unveiled  bronze National Emblem
ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದ ಪ್ರಧಾನಿ

By

Published : Jul 11, 2022, 12:49 PM IST

ನವದೆಹಲಿ: ಹೊಸ ಸಂಸತ್ ಕಟ್ಟಡದ ಮೇಲ್ಛಾವಣಿಯ ಮೇಲೆ ನಿರ್ಮಿಸಲಾದ ಬೃಹತ್‌ ಕಂಚಿನ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಬಳಿಕ ನೂತನ ಸಂಸತ್ತಿನ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಈ ಲಾಂಛನವು ಒಟ್ಟು 9,500 ಕೆ.ಜಿ ತೂಕವಿದ್ದು ಕಂಚಿನಿಂದ ಮಾಡಲ್ಪಟ್ಟಿದೆ. 6.5 ಮೀಟರ್ ಎತ್ತರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದ ಕೇಂದ್ರದ್ವಾರದ ಮೇಲ್ಭಾಗದಲ್ಲಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೇ, ಲಾಂಛನದ ಆಧಾರಕ್ಕಾಗಿ ಸುಮಾರು 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಶ್ರೀಲಂಕಾಕ್ಕೆ ಭಾರತ ಬೆಂಬಲ: ಆರ್ಥಿಕ ಬಿಕ್ಕಟ್ಟು ನಿವಾರಣೆಗೆ 3.8 ಬಿಲಿಯನ್ ಡಾಲರ್‌ ನೆರವು

ABOUT THE AUTHOR

...view details