ಕರ್ನಾಟಕ

karnataka

ETV Bharat / bharat

ಜೂನ್‌ 18ರಂದು 100ನೇ ವಸಂತಕ್ಕೆ ಕಾಲಿಡಲಿದ್ದಾರೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ - ಹೀರಾಬೆನ್ ಮೋದಿ ನರೇಂದ್ರ ಮೋದಿ ಭೇಟಿ

ಜೂ.18ರಂದು ಪ್ರಧಾನಿ ಮೋದಿ ಗುಜರಾತ್​​ ಪ್ರವಾಸ ಕೂಡ ಕೈಗೊಂಡಿದ್ದು, ಅಂದು ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.

PM Narendra Modi's Mother Heeraben turns 100 years on june 18th
100ನೇ ವಸಂತಕ್ಕೆ ಕಾಲಿಡಲಿದ್ದಾರೆ ಪ್ರಧಾನಿ ಮೋದಿ ತಾಯಿ ಹೀರಾಬೆನ್

By

Published : Jun 16, 2022, 5:05 PM IST

ಅಹಮದಾಬಾದ್ (ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಜೂ.18ರಂದು 100ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ಪ್ರಧಾನಿ ಮೋದಿ ಮನೆಗೆ ಭೇಟಿ ನೀಡಿ ತಾಯಿಯಿಂದ ಆಶೀರ್ವಾದ ಪಡೆಯಲಿದ್ದಾರೆ.

"ಹೀರಾಬೆನ್ 1923ರ ಜೂ.18ರಂದು ಜನಿಸಿದ್ದರು. ಈಗ 100ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಡ್ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ" ಎಂದು ಕಿರಿಯ ಮಗ ಪಂಕಜ್ ಮೋದಿ ತಿಳಿಸಿದ್ದಾರೆ.

ಜೂ.18ರಂದು ಪ್ರಧಾನಿ ಮೋದಿ ಗುಜರಾತ್​​ ಪ್ರವಾಸ ಕೂಡ ಕೈಗೊಂಡಿದ್ದಾರೆ. ಹೀಗಾಗಿ ತಾಯಿಯನ್ನು ಭೇಟಿಯಾಗುವ ನಿರೀಕ್ಷೆ ಇದೆ. ಹೀರಾಬೆನ್ ಅವರೊಂದಿಗೆ ಪಂಕಜ್ ಮೋದಿ ವಾಸವಾಗಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಎನ್​ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ

ABOUT THE AUTHOR

...view details