ಕರ್ನಾಟಕ

karnataka

ETV Bharat / bharat

ಇಂದು ಕಾಶಿ ವಿಶ್ವನಾಥ ಕಾರಿಡಾರ್​​​​ ಉದ್ಘಾಟಿಸಲಿರುವ ಪ್ರಧಾನಿ ಮೋದಿ - ವಾರಣಾಸಿಗೆ ಪ್ರಧಾನಿ ಭೇಟಿ

ಗಂಗಾ ಹಾಗೂ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್​​​​ ಅನ್ನು ಇಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ.

kashi vishwanath corridor
ಕಾಶಿ ವಿಶ್ವನಾಥ ಕಾರಿಡಾರ್​​​​ ಉದ್ಘಾಟನೆ

By

Published : Dec 13, 2021, 7:22 AM IST

ನವದೆಹಲಿ:ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿ ಪ್ರವಾಸ ಕೈಗೊಳ್ಳಲಿದ್ದಾರೆ. ಗಂಗಾ ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್​​​​ ಅನ್ನು ಇಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಾಶಿ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಬೆಳಕಿನ ಅಲಂಕಾರದಲ್ಲಿ ಕಾಶಿ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಈ ಪ್ರವಾಸ ಮಹತ್ವ ಪಡೆದುಕೊಂಡಿದ್ದು, ಇದೇ ಕಾರಣಕ್ಕಾಗಿ 'ದಿವ್ಯ ಕಾಶಿ ಭವ್ಯ ಕಾಶಿ' ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಮೆಗಾ ಕಾರ್ಯಕ್ರಮ ಜರುಗಲಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ 12 ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.

ನಾಳೆ ನಡೆಯಲಿರುವ 'ಉತ್ತಮ ಆಡಳಿತ' ವಿಷಯದ ವಿಚಾರ ಸಂಕಿರಣದಲ್ಲಿ ಎಲ್ಲ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಈ ವೇಳೆ, ಕೋವಿಡ್​ ನಿರ್ವಹಣೆ ಹಾಗೂ ವ್ಯಾಕ್ಸಿನೇಷನ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಲಹೆ - ಸೂಚನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಆರಂಭದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಅದಕ್ಕೂ ಮುಂಚಿತವಾಗಿ ಬಿಜೆಪಿ ಈ ಮೆಗಾ ಕಾರ್ಯಕ್ರಮ ಆಯೋಜಿಸಿದೆ.

ಬೃಹತ್​ ಯೋಜನೆ:

ಈ ಕಾರಿಡಾರ್​​ನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣದ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ಸುಮಾರು ₹ 399 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾರಿಡಾರ್ ಇದಾಗಿದೆ. 2019ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಅಲಂಕೃತ ಕಾಶಿ

ಈ ಯೋಜನೆಯು ದೇವಾಲಯದ ಆವರಣ, ವಾರಣಾಸಿ ಸಿಟಿ ಗ್ಯಾಲರಿ, ಮ್ಯೂಸಿಯಂ, ವಿವಿಧೋದ್ದೇಶದ ಆಡಿಟೋರಿಯಂಗಳು, ಸಭಾಂಗಣ, ಭಕ್ತರ ಸೌಲಭ್ಯ ಕೇಂದ್ರ, ಸಾರ್ವಜನಿಕ ಸೌಕರ್ಯ, ಮೋಕ್ಷ ಗೃಹ, ಗೋಡೋವ್ಲಿಯಾ ಗೇಟ್, ಅರ್ಚಕರು ಮತ್ತು ಸೇವಾದಾರರಿಗೆ ಆಶ್ರಯ, ಆಧ್ಯಾತ್ಮಿಕ ಪುಸ್ತಕಗಳಿಗೆ ಸ್ಥಳ ಮತ್ತು ಇತರ ಕಾಮಗಾರಿ ಒಳಗೊಂಡಿದೆ. ಸುಮಾರು 24 ಕಟ್ಟಡಗಳು ನಿರ್ಮಾಣಗೊಂಡಿವೆ. ಪ್ರಮುಖವಾಗಿ ಕಟ್ಟಡದ ಗೋಡೆಗಳ ಮೇಲೆ ಶ್ಲೋಕ, ಸ್ತೋತ್ರ ಕೆತ್ತಲಾಗಿದೆ.

ಇದನ್ನೂ ಓದಿ:ಇಂದಿನಿಂದ ಬೆಳಗಾವಿ ಚಳಿಗಾಲ ಅಧಿವೇಶನ.. ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸಜ್ಜು

ABOUT THE AUTHOR

...view details