ನವದೆಹಲಿ: ದೇಶವನ್ನುದ್ದೇಶಿಸಿ ದಿಢೀರ್ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನವರಿ 3ರರಿಂದ ದೇಶದ ಎಲ್ಲ ಮಕ್ಕಳಿಗೂ ಲಸಿಕೆ ನೀಡುವುದಾಗಿ ಮಹತ್ವದ ಘೋಷಣೆ ಮಾಡಿದರು. ಏಕಾಏಕಿ ಲೈವ್ಗೆ ಬಂದ ಪ್ರಧಾನಿ ಆರಂಭದಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದರು. ಒಮಿಕ್ರಾನ್ ಬಗ್ಗೆ ಯಾವುದೇ ರೀತಿಯಿಂದಲೂ ಆತಂಕಕ್ಕೊಳಗಾದಂತೆ ನಮೋ ಮನವಿ ಮಾಡಿದರು.
ಕೊರೊನಾ ಹೋಗಲಾಡಿಸಲು ಹೋರಾಡುತ್ತಿರುವ ಎಲ್ಲ ಸಿಬ್ಬಂದಿಗೆ(ಕೊರೊನಾ ವಾರಿಯರ್ಸ್ಗೆ) ಮುಂಜಾಗ್ರತೆಗಾಗಿ ಪ್ರಿಕಾಷನರಿ ಡೋಸ್ ನೀಡುವುದಾಗಿಯೂ ಪ್ರಧಾನಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ದೇಶದ ಎಲ್ಲ ಮಕ್ಕಳಿಗೆ ಅಂದರೆ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದಾಗಿ ಪ್ರಕಟಿಸಿದರು.