ಹೈದರಾಬಾದ್:ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಹಾಗು ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹನ ರೆಡ್ಡಿ ಸಹೋದರಿ ವೈ ಎಸ್ ಶರ್ಮಿಳಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಫೋನ್ ಕರೆ ಮಾಡಿರುವುದು ವರದಿಯಾಗಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಶರ್ಮಿಳಾ ಕಾರನ್ನು ಪೊಲೀಸರು ಟೊಯಿಂಗ್ ಮೂಲಕವೇ ಕರೆದುಕೊಂಡು ಹೋಗಿ ಬಂಧಿಸಿದ್ದಕ್ಕೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾಗೆ ಪ್ರಧಾನಿ ಮೋದಿ ಕರೆ - ಕೆಸಿಆರ್ ಕುಟುಂಬ
ಪ್ರಧಾನಿ ಮೋದಿ ಅವರು ಶರ್ಮಿಳಾ ಅವರಿಗೆ ಫೋನ್ ಕರೆ ಮಾಡಿ ಮಾತನಾಡಿ, ಬಂಧನದ ಕುರಿತು ವಿಚಾರಿಸಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ತೆಲಂಗಾಣ ಪಕ್ಷ ಅಧ್ಯಕ್ಷೆ ಶರ್ಮಿಳಾ
ಈ ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶರ್ಮಿಳಾ ಅವರೊಂದಿಗೆ ಎರಡು ಮೂರು ನಿಮಿಷಗಳ ಕಾಲ ಕರೆ ಮಾಡಿ, ಬಂಧನದ ಕುರಿತು ವಿಚಾರಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಹೈದರಾಬಾದ್‌ನ ಟ್ಯಾಂಕ್‌ಬಂಡ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವೈ ಎಸ್ ಶರ್ಮಿಳಾ ಇದೇ ವಿಚಾರವಾಗಿ ಮಾತನಾಡಿ, ಬಂಧನದ ಬಗ್ಗೆ ಸಹಾನುಭೂತಿ ತೋರಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ:ಮತದಾನ ತಡೆಯಲು ಬಿಜೆಪಿ ಗಿಮಿಕ್ ಆರೋಪ: ಕಾಂಗ್ರೆಸ್ನಿಂದ ಚುನಾವಣಾ ಆಯೋಗಕ್ಕೆ ದೂರು