ನವದೆಹಲಿ : ಅಫ್ಘನಿಸ್ತಾನವನ್ನ ತಾಲಿಬಾನ್ ವಶಕ್ಕೆ ಪಡೆದ ಬಳಿಕ ಅಲ್ಲೀಗ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ದೇಶದಲ್ಲಿ ಸೃಷ್ಟಿಯಾಗಿರುವ ಅರಾಜಕತೆ ಕುರಿತಂತೆ ನೆರೆ ರಾಷ್ಟ್ರಗಳು ಕೂಡ ಆತಂಕಕ್ಕೀಡಾಗಿವೆ.
ಅಫ್ಘಾನಿಸ್ತಾನದ ಪ್ರಸ್ತುತ ಬೆಳವಣಿಗೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಜತೆ 45 ನಿಮಿಷಗಳಿಗೂ ಅಧಿಕ ಕಾಲ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕಾರವಾರದ ವ್ಯಕ್ತಿ ಮರಳಿ ತಾಯ್ನಾಡಿಗೆ
ಈಗಾಗಲೇ ವಿದೇಶಾಂಗ ಇಲಾಖೆ, ಅಫ್ಘನ್ನಲ್ಲಿ ಸಿಲುಕಿರುವ ಭಾರತೀಯರು ಹಾಗೂ ಅವರ ಸಂಬಂಧಿಕರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ಮಾಡುತ್ತಿದೆ. ಇದರ ಭಾಗವಾಗಿ ಪ್ರಧಾನಿ, ರಷ್ಯಾ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಫ್ಘನ್ನಲ್ಲಿ ಶಾಂತಿ ನೆಲೆಸಲು ಇತರೆ ರಾಷ್ಟ್ರಗಳ ನಾಯಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ.
ಇದನ್ನೂ ಓದಿ: ಕಾಬೂಲ್ನಿಂದ ಜನರನ್ನು ಸ್ಥಳಾಂತರಿಸುತ್ತಿದ್ದ Ukrainian Plane ಹೈಜಾಕ್?
ನಿನ್ನೆಯಷ್ಟೇ ಪ್ರಧಾನಿ ಮೋದಿ ಜರ್ಮನ್ ಚಾನ್ಸೆಲರ್ ಮಾರ್ಕೆಲ್ ಏಂಜೆಲಾ ಜತೆ 40 ನಿಮಿಷಗಳ ಕಾಲ ಮಾತನಾಡಿದ್ದರು. ಈ ವೇಳೆ ಆಫ್ಘನ್ ಬಿಕ್ಕಟ್ಟು, ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಂಡ ವಿಚಾರ ಹಾಗೂ ಇತರೆ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು.
ಕಳೆದ ಎರಡು ದಿನಗಳ ಹಿಂದಷ್ಟೇ ಅಫ್ಘನ್ ಬಿಕ್ಕಟ್ಟಿನ ಕುರಿತಂತೆ ಬ್ರಿಟನ್ ಅಧ್ಯಕ್ಷರ ನೇತೃತ್ವದಲ್ಲಿ ಜಿ-7 ಸಭೆ ನಡೆಸಲಾಗಿತ್ತು.