ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಫೋನ್ ಮೂಲಕ ಸಂಭಾಷಣೆ ನಡೆಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಈ ವೇಳೆ, ಪುಟಿನ್ ಮತ್ತು ಮೋದಿ ಅವರು ಭಾರತ ಮತ್ತು ರಷ್ಯಾದ ನಡುವಿನ ಸಂಬಂಧ ಸುಧಾರಣೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ನಿರಂತರವಾಗಿ ಶ್ರಮಿಸುವ ಬಗ್ಗೆ ಚರ್ಚೆ ನಡೆಸಿದರು.
ಇದಲ್ಲದೇ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಈ ಹಿಂದಿನ ಭಾರತ ಭೇಟಿಯ ಬಗ್ಗೆಯೂ ಪ್ರಸ್ತಾಪವಾಗಿದೆ. ಭಾರತದ ಕೈಗಾರಿಕೆಗಳನ್ನು ಪ್ರತಿ ವಲಯದಲ್ಲಿ ವಿಶ್ವದ ಅಗ್ರ ಐದು ಸ್ಥಾನಗಳಲ್ಲಿ ಕಾಣಲು ಸರ್ಕಾರ ಬಯಸಿದೆ ಎಂದು ಇದೇ ವೇಳೆ, ಮೋದಿ ಅವರು ಹೇಳಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಇದನ್ನೂ ಓದಿ: ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ನಜ್ರಿಯಾ ನಜೀಮ್ಗೆ ಹುಟ್ಟುಹಬ್ಬದ ಸಂಭ್ರಮ
ರಕ್ಷಣಾ ಕ್ಷೇತ್ರ, ರಸಗೊಬ್ಬರಗಳ ಪೂರೈಕೆಯಲ್ಲಿ ಸಹಕಾರದ ಬಗ್ಗೆಯೂ ಉಭಯ ನಾಯಕರು ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಅಭಿಪ್ರಾಯಗಳ ವಿನಿಮಯವಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.