ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಮೇಲೆ ಇರುವ ಆರೋಪಗಳ ಕುರಿತು ತನಿಖೆಗೆ ಸಂಸದೀಯ ಸಮಿತಿ ರಚಿಸಬೇಕು ಎಂಬ ವಿಪಕ್ಷಗಳ ಆಗ್ರಹಕ್ಕೆ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಕಲಬುರ್ಗಿಗೆ ಭೇಟಿ ನೀಡಿದ ವಿಚಾರ ಕುರಿತು ನೀವು ಟೀಕಿಸಿದ್ದೀರಿ. ಅದಕ್ಕೆ ನಾನು ಈಗ ಉತ್ತರ ಕೊಡುತ್ತಿದ್ದೇನೆ ಎನ್ನುವ ಮೂಲಕ ಕೇಂದ್ರ ಸರ್ಕಾರ ಏನೇನು ಮಾಡಿದೆ ಎಂದು ಉತ್ತರ ಕೊಟ್ಟರು.
ಕಲಬುರ್ಗಿಯಲ್ಲಿ ತಮ್ಮ ಸರ್ಕಾರ ನಡೆಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ನೋಡಬೇಕು. ಮತ್ತು ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆಯೂ ಅವರಿಗೆ ಗೊತ್ತಿದೆ. ಕರ್ನಾಟಕದಲ್ಲಿ 1.20 ಕೋಟಿ ಜನ್ ಧನ್ ಬ್ಯಾಂಕ್ ಖಾತೆ ಮಾಡಿಸಲಾಗಿದೆ. ಕಲಬುರ್ಗಿ ಒಂದರಲ್ಲೇ 8 ಲಕ್ಷ ಜನ್ ಧಾನ್ ಖಾತೆ ತೆರೆಯಲಾಗಿದೆ. ಅನೇಕ ಜನರ ಸಬಲೀಕರಣ ನಡೆಯುತ್ತಿರುವಾಗ ಕೆಲವರ ಖಾತೆ ಮುಚ್ಚಲಾಗಿದೆ. ಇದರಿಂದ ಅವರಿಗೆ ಎಷ್ಟು ನೋವು ಆಗುತ್ತಿದೆ ಎಂದು ತಿಳಿಯುತ್ತಿದೆ ಎಂದು ಖರ್ಗೆ ಅವರಿಗೆ ತಿರುಗೇಟು ನೀಡಿದರು.
ಕಳೆದ 3-4 ವರ್ಷಗಳಲ್ಲಿ 11 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸಾಮಾನ್ಯ ಜನರ ಸಬಲೀಕರಣದ ಕುರಿತು ಮಾತನಾಡುವುದಾದರೆ, ನಾವು ಜನ್ ಧನ್ ಖಾತೆ ಅಭಿಯಾನ ಮಾಡಿದ್ದೇನೆ. ಕಳೆದ 9 ವರ್ಷದಲ್ಲಿ ದೇಶಾದ್ಯಂತ 48 ಕೋಟಿ ಜನ್ಧನ್ ಖಾತೆ ತೆರೆಯಲಾಗಿದೆ ಎಂದು ಅಂಕಿ- ಅಂಶ ಸಮೇತ ಎದಿರೇಟು ನೀಡಿದರು. ಕೆಸರು ಎರಚಿದಷ್ಟು ಕಮಲ ಮತ್ತಷ್ಟು ಹುಲುಸಾಗಿ ಅರಳಲಿದೆ ಎಂಬುದನ್ನು ನಾನು ಪ್ರತಿಪಕ್ಷದ ಸಂಸದರಿಗೆ ತಿಳಿಸಬೇಕಿದೆ. ಸದನದಲ್ಲಿ ಏನು ಮಾತನಾಡಿದ್ದೀರಾ ಎಂಬುದನ್ನು ದೇಶದ ಜಾಗೃತವಾಗಿ ಆಲಿಸುತ್ತಿದೆ. ಕೆಲವು ಸಂಸದರು ಸದನಕ್ಕೆ ಅಗೌರವ ತರುತ್ತಿದ್ದಾರೆ ಎಂದು ಮಾತಿನ ಏಟು ನೀಡಿದರು.
ಖರ್ಗೆ ಮಾತನಾಡಿ ಕೆಲ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ ಸಭಾಧ್ಯಕ್ಷರು:ಇನ್ನು ಸದನದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿದ ಭಾಷಣದ ಕೆಲವು ಅಂಶಗಳನ್ನು ತೆಗೆದು ಹಾಕಿದ ಬೆನ್ನಲ್ಲೇ ಇದೀಗ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಕೆಲವು ವಿಚಾರಗಳನ್ನು ಕಡತದಿಂದ ತೆಗೆದು ಹಾಕಿಲಾಗಿದೆ. ಇದಕ್ಕೆ ಪ್ರತಿಪಕ್ಷದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಸದನದಲ್ಲಿ ಮಾತನಾಡಿದ ಅವರು, ನಾನು ಅಸಂಸದೀಯವಾಗಿ ಯಾವುದೇ ಮಾತುಗಳನ್ನು ಆಡಿಲ್ಲ. ಆದರೆ, ತಮ್ಮ ಭಾಷಣದ ಕೆಲವು ಅಂಶಗಳನ್ನು ಸಂಸದೀಯ ಕಡತದಿಂದ ತೆಗೆದು ಹಾಕಲಾಗಿದೆ.