ನವದೆಹಲಿ:ಭಾರತವನ್ನು ಬಲಿಷ್ಠ, ಸಮೃದ್ಧ ಮತ್ತು ಸಮರ್ಥವಾಗಿ ಕಟ್ಟಲು ಅಬ್ದುಲ್ ಕಲಾಂ ತಮ್ಮ ಜೀವನವನ್ನು ಅರ್ಪಿಸಿದರು. ಅವರು ದೇಶವಾಸಿಗಳಿಗೆ ಯಾವಾಗಲೂ ಸ್ಫೂರ್ತಿಯಾಗಿ ಉಳಿಯುತ್ತಾರೆ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಗೌರವ:
ರಾಷ್ಟ್ರಪತಿ ರಾಮನಾಥ ಕೋವಿಂದ್ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದು, ಉಧಂಪುರದಲ್ಲಿ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ದೇಶ ಕಂಡ ಮಹಾನ್ ಚೇತನ ಕಲಾಂ:
ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿ ಅವರ ಜೀವನವು ಸಾಕಷ್ಟು ಕಷ್ಟ ಮತ್ತು ಹೋರಾಟಗಳಿಂದ ಕೂಡಿತ್ತು.
ಇಸ್ರೋದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ:
1998 ರಲ್ಲಿ ಪೋಖ್ರನ್-2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ತಾಂತ್ರಿಕವಾಗಿ, ರಾಜಕೀಯವಾಗಿ ಪ್ರಧಾನ ಪಾತ್ರವನ್ನು ಕಲಾಂ ವಹಿಸಿದ್ದರು. ರಾಷ್ಟ್ರಪತಿ ಆಗುವುದಕ್ಕೂ ಮುನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.
ಭಾರತದ ಕ್ಷಿಪಣಿ ಮನುಷ್ಯ:
ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ತಯಾರಿಸಿರುವ ಕಾರಣ ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯಾ) ಎಂದು ಕಲಾಂ ಅವರನ್ನು ಸಂಬೋಧಿಸಲಾಗುತ್ತದೆ. ಅಣ್ಣಾ ವಿಶ್ವವಿದ್ಯಾಯಲಯ (ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾಧ್ಯಾಪಕರಾಗಿ ಕಲಾಂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಐಐಎಮ್ ಅಹಮದಾಬಾದ್ ಮತ್ತು ಐಐಎಮ್ ಇಂದೋರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.
2015ರಲ್ಲಿ ನಿಧನ:
ಅಬ್ದುಲ್ ಕಲಾಂ ಜುಲೈ 27, 2015 ರಂದು ಶಿಲ್ಲಾಂಗ್ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕುಸಿದುಬಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಇದನ್ನೂಓದಿ: ವಿಜಯದಶಮಿ: ದೇಶದ ಜನತೆಗೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ