ನವದೆಹಲಿ:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪ್ರತಿ ರೈತರ ಬ್ಯಾಂಕ್ ಖಾತೆಗಳಿಗೆ 9ನೇ ಕಂತಿನ ಎರಡು ಸಾವಿರ ರೂ. ಹಣವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಬಂತು 9ನೇ ಕಂತಿನ ಹಣ
9.75 ಕೋಟಿ ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಹಣ ಬಿಡುಗಡೆ ಮಾಡಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿ ರೈತರ ಖಾತೆಗೆ 9ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ
ಕೇಂದ್ರ ಸರ್ಕಾರ ವಾರ್ಷಿಕವಾಗಿ ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರದಂತೆ ಒಟ್ಟು 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿದೆ. ಸುಮಾರು 9.75 ಕೋಟಿ ರೈತರಿಗೆ ಎರಡು ಸಾವಿರ ರೂ. ಜಮೆಯಾಗುತ್ತದೆ. ಪ್ರತಿ ಕಂತಿನಲ್ಲಿಯೂ 9.75 ಕೋಟಿ ರೈತರಿಗೆ ಒಟ್ಟು 19,500 ರೂ. ವರ್ಗಾವಣೆಯಾಗುತ್ತದೆ.
8ನೇ ಕಂತನ್ನು ಅಕ್ಷಯ ತೃತೀಯದಂದು 9 ಕೋಟಿ ರೈತರ ಖಾತೆಗೆ ಪಿಎಂ ಮೋದಿ ಬಿಡುಗಡೆ ಮಾಡಿದ್ದರು.