ಹೈದರಾಬಾದ್: ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್-19 ಲಸಿಕೆ, ಕೋವಾಕ್ಸಿನ್ ಬಗ್ಗೆ ಮಾಹಿತಿ ಪಡೆದ ನಂತರ ಪ್ರಧಾನಿ ಮೋದಿ ಹೈದರಾಬಾದ್ನಿಂದ ಪುಣೆಗೆ ಪ್ರಯಾಣ ಬೆಳೆಸಿದ್ದಾರೆ.
ಭಾರತ್ ಬಯೋಟೆಕ್ ಭೇಟಿ ನಂತರ ಪುಣೆಗೆ ಪ್ರಯಾಣ ಬೆಳೆಸಿದ ಮೋದಿ - ಪುಣೆಗೆ ಪ್ರಯಾಣ ಬೆಳೆಸಿದ ಮೋದಿ
ಭಾರತ್ ಬಯೋಟೆಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ವಿಜ್ಞಾನಿಗಳೊಂದಿಗೆ ಮಾತನಾಡಿ 'ಕೋವಾಕ್ಸಿನ್' ಲಸಿಕೆಯ ಪ್ರಗತಿಯನ್ನು ತಿಳಿದುಕೊಂಡಿದ್ದಾರೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಲಸಿಕೆ ಕ್ಲಿನಿಕಲ್ ಪ್ರಯೋಗಗಳ ಮೂರನೇ ಹಂತದಲ್ಲಿದೆ. ಭೇಟಿ ವೇಳೆ ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿಜ್ಞಾನಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಲಸಿಕೆಯ ಪ್ರಗತಿಯನ್ನು ಕಂಡುಕೊಂಡು ಇದೀಗ ಪುಣೆಯತ್ತ ತೆರಳಿದ್ದಾರೆ.
ಕೊರೊನಾ ಲಸಿಕೆಯ ಅಭಿವೃದ್ಧಿಯನ್ನು ಪರಿಶೀಲಿಸಲು ಮೋದಿ ಮೂರು ನಗರಗಳಲ್ಲಿಪ್ರವಾಸ ಮಾಡುತ್ತಿದ್ದಾರೆ. ಬೆಳಗ್ಗೆ ಗುಜರಾತ್‌ನ ಅಹಮದಾಬಾದ್ನ ಝೈಡಸ್ ಬಯೋಟೆಕ್ ಕಂಪನಿಗೆ ಭೇಟಿ ನೀಡಿದ್ದರು. ಅಲ್ಲಿಂದ ಹೈದರಾಬಾದ್ಗೆ ಆಗಮಿಸಿದ್ದ ಮೋದಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಗೆ ಭೇಟಿ ನೀಡಲಿದ್ದಾರೆ.