ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡುವ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಭರವಸೆಯ ಸೇತುವೆಯಾಗಿ ಹೊರಹೊಮ್ಮಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಣ್ಣಿಸಿದ್ದಾರೆ.
ಈ ಬಗ್ಗೆ ದೇಶಿ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಕೂನಲ್ಲಿ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿರುವ ಅವರು, ಪಿಎಂ ಮೋದಿ ಜೀ, ಇಂಡಿಯಾಸ್ ಬ್ರಿಡ್ಜ್ ಆಫ್ ಹೋಪ್ ಎಂದು ಬರೆದುಕೊಂಡಿದ್ದಾರೆ.
ಈ ವ್ಯಂಗ್ಯಚಿತ್ರದಲ್ಲಿ ಕಾಲುವೆಯ ನೀರಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತನ್ನ ಬಾಹುಗಳನ್ನು ಎರಡೂ ಕಡೆ ಚಾಚಿದ್ದು, ಮತ್ತೊಂದು ಕಡೆಯಿಂದ ವಿದ್ಯಾರ್ಥಿಗಳು ನಡೆದು ಭಾರತ ತಲುಪುತ್ತಿರುವಂತೆ ಚಿತ್ರಿಸಲಾಗಿದೆ.
ಆದರೆ, ಅಮೆರಿಕ, ಚೀನಾ ಹಾಗೂ ಪಾಕಿಸ್ತಾನ ಸೇರಿದಂತೆ ಇತರೆ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಸ್ವದೇಶ ಸೇರಿಸಲು ನೆರವಿಗೆ ಬಂದಿಲ್ಲ. ಅವರ ರಕ್ಷಣೆಯನ್ನು ಮಾಡ್ತಿಲ್ಲ. ಹೀಗಾಗಿ, ನೆರವಿಗಾಗಿ ಆ ದೇಶದ ನಾಗರಿಕರು ಕೂಡಾ ಭಾರತದ ನಿರೀಕ್ಷೆಯಲ್ಲಿದ್ದಾರೆ ಎಂಬ ಸಂದೇಶವಿದೆ. ಈ ದೇಶಗಳ ನಾಯಕರಾದ ಬೈಡನ್, ಕ್ಸಿ ಜಿಂಗ್‌ಪಿಂಗ್ ಹಾಗೂ ಇಮ್ರಾನ್ ಖಾನ್ ಗೋಡೆ ಬಳಿ ನಿಂತು ಇಣುಕಿ ನೋಡುತ್ತಿರುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಮಹಾ ಪಲಾಯನ