ಕರ್ನಾಟಕ

karnataka

ETV Bharat / bharat

Modi in Varanasi: ಬನಾರಸ್​​ ರೈಲು ನಿಲ್ದಾಣಕ್ಕೆ ತಡರಾತ್ರಿ ಭೇಟಿ, ಪರಿಶೀಲನೆ ನಡೆಸಿದ ನಮೋ

ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಇದೀಗ ನಮೋ ಕಹಳೆ ಮೊಳಗಿದೆ. ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ, ಶಿಷ್ಟಾಚಾರ ಬದಿಗೊತ್ತಿ ತಡರಾತ್ರಿ ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.

Modi inspects Banaras Railway Station
Modi inspects Banaras Railway Station

By

Published : Dec 14, 2021, 4:35 AM IST

ವಾರಣಾಸಿ(ಉತ್ತರ ಪ್ರದೇಶ):ಸ್ವಕ್ಷೇತ್ರ ವಾರಣಾಸಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಡರಾತ್ರಿ ಬನಾರಸ್​​ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಅವರು, ರೈಲು ಸಂಪರ್ಕ ಹೆಚ್ಚಿಸಲು, ಸ್ವಚ್ಛತೆ, ಆಧುನಿಕತೆ ಮತ್ತು ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣ ನಿರ್ಮಾಣ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬನಾರಸ್​​ ರೈಲು ನಿಲ್ದಾಣಕ್ಕೆ ತಡರಾತ್ರಿ ಭೇಟಿ, ಪರಿಶೀಲನೆ ನಡೆಸಿದ ನಮೋ

ಮೂರು ದಿನಗಳ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ತಡರಾತ್ರಿ ವಿವಿಧ ಅಭಿವೃದ್ಧಿ ಪರ ಯೋಜನೆಗಳ ವೀಕ್ಷಣೆ ಮಾಡಿದ್ದು, ಕೆಲವೊಂದು ಮಹತ್ವದ ಸೂಚನೆ ನೀಡಿದ್ದಾಗಿ ವರದಿಯಾಗಿದೆ. ಈ ವೇಳೆ ಜನರೊಂದಿಗೆ ಬೆರೆತು ಮಾತನಾಡಿದ ನಮೋ, ಅಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು. ಪ್ರಧಾನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಸಾಥ್​ ನೀಡಿದರು.

ಇಂದು ಉತ್ತಮ ಆಡಳಿತ ಕುರಿತ ಸಮ್ಮೇಳನ

ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಉತ್ತಮ ಆಡಳಿತ ಸಂಬಂಧ ಚರ್ಚಿಸಲು 'ಸುಶಾಸನ ಸಂಗಮ' ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಕೋವಿಡ್​ ನಿರ್ವಹಣೆ ಹಾಗೂ ವ್ಯಾಕ್ಸಿನೇಷನ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಲಹೆ - ಸೂಚನೆ ನೀಡಲಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿರಿ:ಇಂದು ಹೊರಬೀಳಲಿದೆ ಪರಿಷತ್​ ಚುನಾವಣೆ ಫಲಿತಾಂಶ... ಯಾರಿಗೆ 'ಮಂಗಳ'ವಾರ?

ಈಗಾಗಲೇ ಸೋಮವಾರ 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್​​ನ ಮೊದಲನೇ ಹಂತ ಉದ್ಘಾಟನೆ ಮಾಡಿರುವ ನಮೋ, ಸಂಜೆ ನಡೆದ ಗಂಗಾರತಿಯಲ್ಲೂ ಭಾಗಿಯಾಗಿದ್ದರು.

ABOUT THE AUTHOR

...view details