ವಾರಾಣಸಿ (ಉ.ಪ್ರ):ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕನಸಿನ ಯೋಜನೆಯಾದ ‘ವಿಶ್ವನಾಥ ಕಾರಿಡಾರ್’ ಯೋಜನೆಯು ಡಿ.13ರಂದು ಲೋಕಾರ್ಪಣಗೊಳ್ಳುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಹ ಭಾಗಿಯಾಗಲಿದ್ದಾರೆ. ಜತೆಗೆ ಎರಡು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಪ್ರಧಾನಿ ಮೋದಿ ವಾಸ್ತವ್ಯ ಹಿನ್ನೆಲೆ ಅವರ ಅತಿಥಿ ಗೃಹವು ವಿಶೇಷವಾಗಿ ತಯರಾಗುತ್ತಿದೆ. ಬನಾರಸ್ನಲ್ಲಿರುವ ಲೋಕೋಮೋಟಿವ್ ವರ್ಕ್ಶಾಪ್ನ ಅತಿಥಿ ಗೃಹದಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಈ ಹಿಂದೆ ಭೇಟಿ ನೀಡಿದಾಗಲೂ ಸಹ ಅವರು ಇದೇ ಕೊಠಡಿಯಲ್ಲಿ ಉಳಿದಿದ್ದರು. ಆದರೆ, ಈ ಬಾರಿ ವಿಶೇಷವಾಗಿ ಸಿದ್ಧಗೊಳ್ಳುತ್ತಿದೆ.
ಈ ಅತಿಥಿ ಗೃಹದ ಒಂದು ಕೊಠಡಿಯನ್ನು ಪ್ರಧಾನಿಯವರಿಗಾಗಿಯೇ ಮೀಸಲಿಡಲಾಗಿದೆಯಂತೆ. ಹಾಗಾಗಿ ಈ ಕೊಠಡಿಗೆ ಯಾವುದೇ ನಂಬರ್ ಅನ್ನು ನೀಡಿಲ್ಲ. ಜೊತೆಗೆ ಬೇರೆ ಯಾರಿಗೂ ಈ ಕೊಠಡಿಯನ್ನ ವಾಸ್ತವ್ಯಕ್ಕಾಗಿ ನೀಡುತ್ತಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.