ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ಅಭಿವೃದ್ಧಿ ವಾಹನ ರಿವರ್ಸ್ ಗೇರ್‌ನಲ್ಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದೀಜಿ ಅವರ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಮತ್ತು ಬ್ರೇಕ್‌ಗಳು ಫೇಲ್ ಆಗಿವೆ. ಲಕ್ಷಾಂತರ ಕುಟುಂಬಗಳು ಈಗಲೂ ಸೌದೆ ಒಲೆ ಬಳಸುತ್ತಿದ್ದು, ಅಭಿವೃದ್ಧಿಯಿಂದ ದೂರ ಉಳಿದಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನಲ್ಲಿ ಎಲ್‌ಪಿಜಿ ದರಗಳ ಏರಿಕೆ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದು, ಮಾಧ್ಯಮವೊಂದರ ವರದಿಯನ್ನು ಹಂಚಿಕೊಂಡಿದ್ದಾರೆ. ಪೆಟ್ರೋಲಿಯಂ ಕಂಪನಿಗಳು ಅಕ್ಟೋಬರ್ 6 ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 15 ರೂಪಾಯಿ ಮತ್ತು ನವೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 266 ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದವು.
ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿಯ ಗೃಹಬಳಕೆಯ ಸಿಲಿಂಡರ್‌ನ ಬೆಲೆ 899.50 ರೂಪಾಯಿ ಆಗಿದ್ದು, 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ಬೆಲೆ 2 ಸಾವಿರ ರೂಪಾಯಿಗೆ ತಲುಪಿತ್ತು.
ಇದನ್ನೂ ಓದಿ:ನೆಹ್ರಾ, ಧವನ್, ಪಂತ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಕೋಚಿಂಗ್ ನೀಡಿದ್ದ ತಾರಕ್ ಸಿನ್ಹಾ ನಿಧನ