ಅಹಮದಾಬಾದ್ (ಗುಜರಾತ್): ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ವಾಹನ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸ್ವಲ್ಪ ಹೊತ್ತು ನಿಂತಿತ್ತು.
ವಿಡಿಯೋದಲ್ಲಿ ಮೋದಿಯವರ ಬೆಂಗಾವಲು ಪಡೆಯ ಭಾಗವಾಗಿದ್ದ, ಕಪ್ಪು ಬಣ್ಣದ ವಾಹನವು ಅಹಮದಾಬಾದ್ - ಗಾಂಧಿನಗರ ರಸ್ತೆಯಲ್ಲಿ ಆ್ಯಂಬುಲೆನ್ಸ್ ಹೋಗಲು ರಸ್ತೆಯ ಎಡಭಾಗಕ್ಕೆ ಚಲಿಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ಗಾಂಧಿನಗರದ ರಾಜಭವನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.