ಕರ್ನಾಟಕ

karnataka

ETV Bharat / bharat

ಧರಣಿ ಕುಳಿತ ಪ್ರಧಾನಿ ಮೋದಿ ಕಿರಿಯ ಸಹೋದರ: ಕಾರಣ!? - ಅಖಿಲ ಭಾರತ ನ್ಯಾಯೋಚಿತ ಬೆಲೆ ಮಾರಾಟಗಾರರ ಒಕ್ಕೂಟ

ಬಂಧನಕ್ಕೊಳಗಾದ ತಮ್ಮ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಧರಣಿ ಕುಳಿತಿದ್ದಾರೆ.

protest
ಪ್ರಧಾನಿ ಮೋದಿ ಕಿರಿಯ ಸಹೋದರ ಪ್ರಹ್ಲಾದ್ ಮೋದಿ

By

Published : Feb 3, 2021, 5:31 PM IST

ಲಖನೌ: ಬಂಧನಕ್ಕೊಳಗಾದ ತಮ್ಮ ಬೆಂಬಲಿಗರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಲಖನೌದಲ್ಲಿ ಧರಣಿ ಕುಳಿತಿದ್ದಾರೆ.

ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತ ಪ್ರಹ್ಲಾದ್​ ಮೋದಿ, ಲಖನೌ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಅವರ ಬೆಂಬಲಿಗರನ್ನು ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪ್ರಹ್ಲಾದ್​ ಮೋದಿಯವರು ಅಖಿಲ ಭಾರತ ನ್ಯಾಯೋಚಿತ ಬೆಲೆ ಮಾರಾಟಗಾರರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್) ಉಪಾಧ್ಯಕ್ಷರಾಗಿದ್ದಾರೆ.

ABOUT THE AUTHOR

...view details