ವಾಷಿಂಗ್ಟನ್(ಅಮೆರಿಕ): ಪ್ರಧಾನಿ ಮೋದಿ ಮತ್ತೊಂದು ಜಾಗತಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಡಾಟಾ ಇಂಟಲಿಜೆನ್ಸ್ ಕಂಪನಿಯ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಜಗತ್ತಿನ 13 ರಾಷ್ಟ್ರಗಳ ಚುನಾಯಿತ ನಾಯಕರ ಒಪ್ಪಿತ ನಾಯಕತ್ವ ಸೂಚ್ಯಂಕ (Global Leaders approval ratings) ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಮೋದಿ ಶೇಕಡಾ 66ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು 2,126 ಯುವಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಮೋದಿ ಅವರನ್ನು ಒಪ್ಪಿತ ನಾಯಕರೆಂದು ಶೇಕಡಾ 82ರಷ್ಟು ಮಂದಿ ಸೂಚಿಸಿದ್ದು, ಶೇ 28ರಷ್ಟು ಮಂದಿ ಮೋದಿ ಅವರನ್ನು ಒಪ್ಪಿತ ನಾಯಕರೆಂದು ಒಪ್ಪಿಕೊಳ್ಳಲಿಲ್ಲ. ಆದರೂ 13 ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನದಲ್ಲಿ ಪ್ರಧಾನಿ ಮೋದಿ ಇದ್ದಾರೆ.
ಇದನ್ನೂ ಓದಿ:'ಎಲ್ಲ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪವಿದೆ, ಯಾವ ಮಂತ್ರಿಯೂ ಸಮಾಧಾನವಾಗಿಲ್ಲ'
ಇನ್ನುಳಿದ 12 ದೇಶದ ನಾಯಕರ ವಿವರ
ಮಾರ್ನಿಂಗ್ ಕನ್ಸಲ್ಟ್ ಪ್ರಕಾರ, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ (ಶೇಕಡಾ 65), ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಶೇಕಡಾ 63), ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (ಶೇಕಡಾ 54), ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (ಶೇಕಡಾ 53), ಯುಎಸ್ ಅಧ್ಯಕ್ಷ ಜೋ ಬೈಡೆನ್ (ಶೇಕಡಾ 53), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (ಶೇಕಡಾ 48), ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (ಶೇಕಡಾ 44), ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ (ಶೇಕಡಾ 37), ಸ್ಪ್ಯಾನಿಷ್ ಸ್ಪೇನ್ ಪೆಡ್ರೊ ಸ್ಯಾಂಚೆಜ್ (ಶೇಕಡಾ 36), ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ (ಶೇಕಡಾ 35), ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (ಶೇಕಡಾ 35) ಮತ್ತು ಜಪಾನಿನ ಪ್ರಧಾನಿ ಯೋಶಿಹಿಡೆ ಸುಗಾ (ಶೇಕಡಾ 29)
ಶೇಕಡಾ 82ರಷ್ಟು ಅಂಕ ಪಡೆದಿದ್ದ ಮೋದಿ
2019ರ ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದಾಗ ಪ್ರಧಾನಿ ಮೋದಿ ಅವರ ಚುನಾಯಿತ ನಾಯಕರ ಒಪ್ಪಿತ ನಾಯಕತ್ವ ಸೂಚ್ಯಂಕದಲ್ಲಿ ಶೇಕಡಾ 82ರಷ್ಟು ಅಂಕಗಳನ್ನು ಪಡೆದಿದ್ದರು.