ಕರ್ನಾಟಕ

karnataka

ETV Bharat / bharat

200 ಕೋಟಿ ಲಸಿಕೆ ದಾಖಲೆ: ಲಸಿಕೆ ಹಾಕಿದವರಿಗೆ ಪ್ರಧಾನಿ ಮೋದಿ ಅಭಿನಂದನಾ ಪತ್ರ - 200 ಕೋಟಿ ಲಸಿಕೆ ಡೋಸ್​ ದಾಖಲೆ

ಕೊರೊನಾ ಲಸಿಕೆ ಡೋಸ್​ 200 ಕೋಟಿ ದಾಖಲೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ನೀಡಿದ ಎಲ್ಲ ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ.

ಲಸಿಕೆ ಹಾಕಿದವರಿಗೆ ಪ್ರಧಾನಿ ಮೋದಿ ಅಭಿನಂದನಾ ಪತ್ರ
ಲಸಿಕೆ ಹಾಕಿದವರಿಗೆ ಪ್ರಧಾನಿ ಮೋದಿ ಅಭಿನಂದನಾ ಪತ್ರ

By

Published : Jul 20, 2022, 10:35 AM IST

ನವದೆಹಲಿ:ಕೋವಿಡ್​ ತಡೆಗೆ ನೀಡಲಾಗುತ್ತಿರುವ ಕೊರೊನಾ ಲಸಿಕೆ ಡೋಸ್​ 200 ಕೋಟಿ ಮೈಲುಗಲ್ಲು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿದ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ.

ಜುಲೈ 17 ರಂದು ಲಸಿಕೆಯ 200 ಕೋಟಿ ಡೋಸ್ ನೀಡಿದ ಹೆಗ್ಗುರುತನ್ನು ಸಾಧಿಸಿದೆ. ಈ ಮಹತ್ತರ ಕಾರ್ಯದಲ್ಲಿ ಪಾಲುದಾರರಾಗಿರುವ ಲಸಿಕೆ ನೀಡಿದ ನೋಂದಾಯಿತರಿಗೆ ವೈಯಕ್ತಿಕವಾಗಿ ಅಭಿನಂದನಾ ಪತ್ರವನ್ನು ಪ್ರಧಾನಿ ಮೋದಿ ಬರೆದಿದ್ದಾರೆ. ಎಲ್ಲ ವ್ಯಾಕ್ಸಿನೇಟರ್​ಗಳು ಇದನ್ನು ಕೋವಿನ್​ ಲಾಗಿನ್​ ಐಡಿಯಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

2021 ರ ಜನವರಿ 1 ರಂದು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿದ ಕೋವಿಶೀಲ್ಡ್‌ ಹಾಗೂ ಭಾರತ್ ಬಯೋಟೆಕ್‌ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು. 2021ರ ಜನವರಿ 16 ರಿಂದ ದೇಶಾದ್ಯಂತ ಕೋವಿನ್‌ ವೇದಿಕೆಯ ಮೂಲಕ ಲಸಿಕಾಭಿಯಾನ ಶುರುವಾಗಿತ್ತು.

ಇದೇ ವೇಳೆ ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ 200 ಕೋಟಿಯ ಲಸಿಕೆ ದಾಖಲೆಗಾಗಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ​ಮಾಡಿದ್ದಾರೆ.

ಇದನ್ನೂ ಓದಿ:200 ಕೋಟಿ ಕೋವಿಡ್​​ ವ್ಯಾಕ್ಸಿನೇಷನ್​​: ಮೋದಿಗೆ ಬಿಲ್​ ಗೇಟ್ಸ್ ಅಭಿನಂದನೆ

ABOUT THE AUTHOR

...view details