ದೆಹಲಿ:ದೇಶದಲ್ಲಿಂದು ಮರ್ಯಾದಾ ಪುರುಷೋತ್ತಮಶ್ರೀರಾಮನ ಜನ್ಮದಿನದ ಸಡಗರ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ದೇಶದ ಎಲ್ಲರಿಗೂ ರಾಮ ನವಮಿ ಶುಭಾಶಯಗಳು. ಭಗವಾನ್ ರಾಮನ ಸಂದೇಶವು ಪ್ರತಿಯೊಬ್ಬರೂ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ಹೇಳುತ್ತದೆ. ಅದರಂತೆ ನಾವು ನಡೆದುಕೊಳ್ಳೋಣ. ರಾಮನ ಅನುಕಂಪ ಯಾವಾಗಲೂ ದೇಶದ ಜನರ ಮೇಲಿರಲಿ ಎಂದು ಅವರು ಆಶಿಸಿದ್ದಾರೆ.