ನವದೆಹಲಿ: ಪೊಂಗಲ್, ಮಾಘ ಬಿಹು ಮತ್ತು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನರಿಗೆ ಶುಭಾಶಯ ಕೋರಿದ್ದಾರೆ. ಮಾಘ ಬಿಹುವಿನ ಶುಭಾಶಯಗಳು. ಈ ಹಬ್ಬವು ಪ್ರಕೃತಿಯೊಂದಿಗೆ ನಮ್ಮ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಮತ್ತು ಸಂತೋಷದ ವಾತಾವರಣವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರತಿಯೊಬ್ಬರಿಗೂ, ವಿಶೇಷವಾಗಿ ಪ್ರಪಂಚದಾದ್ಯಂತದ ತಮಿಳು ಜನರಿಗೆ ಪೊಂಗಲ್ ಶುಭಾಶಯಗಳು. ಈ ಹಬ್ಬವು ಜೀವನದಲ್ಲಿ ಎಲ್ಲರಿಗೂ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿಯವರು ಮಕರ ಸಂಕ್ರಾಂತಿಯಂದು ಜನರಿಗೆ ಶುಭಾಶಯ ಕೋರಿದ್ದಾರೆ. ಮಕರ ಸಂಕ್ರಾಂತಿಯು ಸೂರ್ಯ ದೇವರಿಗೆ ಸಮರ್ಪಿತವಾದ ಹಬ್ಬವಾಗಿದ್ದರೆ, ವಾರ್ಷಿಕ ಸುಗ್ಗಿಯು 'ಮಾಘ ಬಿಹು' ಆಗಿರುತ್ತದೆ. ಪೊಂಗಲ್ ಸೂರ್ಯ ದೇವರಿಗೆ ಮೀಸಲಾಗಿರುವ ನಾಲ್ಕು ದಿನಗಳ ಸುಗ್ಗಿಯ ಹಬ್ಬವಾಗಿದೆ.
19 ರಂದು ಮೆಟ್ರೊ ರೈಲು ಉದ್ಘಾಟನೆ:ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19 ರಂದು ಮುಂಬೈನಲ್ಲಿ ಎರಡು ಮೆಟ್ರೋ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ಮೆಟ್ರೋ 2A ಮತ್ತು ಮೆಟ್ರೋ 7 ಅಂದು ಉದ್ಘಾಟನೆಯಾಗಲಿವೆ. ಮೆಟ್ರೋ 2 A ಅಂಧೇರಿಯಿಂದ ಪಶ್ಚಿಮ ದಹಿಸರ್ ನಡುವೆ ಮತ್ತು ಮೆಟ್ರೋ 7 ಅಂಧೇರಿ ಪೂರ್ವದಿಂದ ದಹಿಸರ್ ನಡುವೆ ಚಲಿಸುತ್ತದೆ. ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೆ ಮುಂಚಿತವಾಗಿ, ನಾವು ಈ ಮೆಟ್ರೋ ಮಾರ್ಗವನ್ನು ಪರಿಶೀಲಿಸಲು ಬಂದಿದ್ದೇವೆ. ಒಟ್ಟಾರೆಯಾಗಿ ಮೆಟ್ರೋ ಮಾರ್ಗಗಳು 2A (ಅಂಧೇರಿ-ಪಶ್ಚಿಮದಿಂದ ದಹಿಸರ್), ಮೆಟ್ರೋ 7 (ಅಂಧೇರಿ ಪೂರ್ವದಿಂದ ದಹಿಸರ್) ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದರು. ಮುಂಬೈ ಪಶ್ಚಿಮ ಉಪನಗರಗಳ ನಿವಾಸಿಗಳಿಗೆ ಈ ಮೆಟ್ರೊ ಲೈನ್ ದೊಡ್ಡಮಟ್ಟದಲ್ಲಿ ಉಪಯೋಗವಾಗಲಿದೆ ಎಂದು ಅವರು ಹೇಳಿದರು.