ಉಮ್ರಾಹಾ(ಉತ್ತರ ಪ್ರದೇಶ):ಕಾಶಿ ಕಾರಿಡಾರ್ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಉತ್ತರಪ್ರದೇಶ ಪ್ರವಾಸ ಇಂದು(ಮಂಗಳವಾರ) ಕೊನೆಗೊಂಡಿದೆ.
ಇದಕ್ಕೂ ಮುನ್ನ ಉಮ್ರಾಹಾದಲ್ಲಿನ ಸದ್ಗುರು ಸದಾಫಲ್ದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಸ್ವದೇಶಿ ಚಳವಳಿಯ ಮಾದರಿಯಲ್ಲಿ ಈಗ 'ಆತ್ಮ ನಿರ್ಭರ್ ಭಾರತ' ಕಟ್ಟಲಾಗುತ್ತಿದೆ. ನಮ್ಮ ರಾಷ್ಟ್ರ ಅದ್ಭುತವಾಗಿದೆ. ದೇಶ ಸಂಕಷ್ಟ ಸಮಯ ಎದುರಿಸಿದಾಗ ಮಹಾಮಹಿಮರ ಮಂತ್ರೋಪದೇಶಗಳು ಇದಕ್ಕೆ ದಾರಿ ತೋರಿವೆ. ಇದು ದೇಶದ ನಿಜವಾದ ಸತ್ವವಾಗಿದೆ ಎಂದರು.
ಇದೀಗ ದೇಶವು ಎಲ್ಲರ ವಿಕಾಸ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ದೇಶದ ಯುವಕರು ಸಂತರು ಸಿದ್ಧಾಂತಗಳಿಂದ ಪ್ರೇರೇಪಿತರಾಗಿದ್ದಾರೆ. ಯೋಗದ ಶಕ್ತಿಯನ್ನು ಜಗತ್ತು ಅರಿತುಕೊಂಡಿದೆ. ನವ ಭಾರತದ ಕನಸುಗಳನ್ನು ನನಸಾಗಿಸಲು ಇದು ನೆರವಾಗಿದೆ ಎಂದು ಮೋದಿ ಹೇಳಿದರು.