ಫಿರೋಜ್ಪುರ್(ಪಂಜಾಬ್):ಪಂಜಾಬ್ನ ಫಿರೋಜ್ಪುರ್ನಲ್ಲಿ ಆಯೋಜನೆ ಮಾಡಲ್ಪಟ್ಟಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ಅನುಭವಿಸಿದ್ದು, ಇದೇ ಕಾರಣಕ್ಕಾಗಿ ಸಭೆಯಲ್ಲಿ ಭಾಗಿಯಾಗದೇ ದೆಹಲಿಗೆ ವಾಪಸ್ ಆಗಿದ್ದಾರೆ.
ಪಂಜಾಬ್ನ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಈ ವೇಳೆ ಫ್ಲೈಓವರ್ನಲ್ಲಿ ಎದುರುಗಡೆಯಿಂದ ಸಾಗುತ್ತಿದ್ದ ಅಪರಿಚಿತ ವಾಹನದಲ್ಲಿ ಪ್ರಧಾನಿ ಕಾರು ಸಂಚರಿಸುತ್ತಿರುವ ವಿಡಿಯೋ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:15-20 ನಿಮಿಷ ಫ್ಲೈಓವರ್ನಲ್ಲೇ ಸಿಲುಕಿಕೊಂಡ ಮೋದಿ; ಪಂಜಾಬ್‌ನಲ್ಲಿ ಬಹುದೊಡ್ಡ ಭದ್ರತಾ ಲೋಪ
ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಫ್ಲೈ ಓವರ್ನಲ್ಲೇ ಸಿಲುಕಿಕೊಂಡಿದ್ದು, ಈ ವೇಳೆ ಫ್ಲೈಓವರ್ನಲ್ಲೇ ತೆರಳುತ್ತಿದ್ದ ಅಪರಿಚಿತ ವಾಹನದಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತವಾಗಿ ಏರ್ಪೋರ್ಟ್ವರೆಗೂ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ' ಎಂದು ಚಾಟಿ ಬೀಸಿದ್ದಾರೆ.
ಪಂಜಾಬ್‌ನಲ್ಲಿ ಮೋದಿಗೆ ಬಹುದೊಡ್ಡ ಭದ್ರತಾ ವೈಫಲ್ಯ ಎದುರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್, ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದು, ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ದೇಶದ ಪ್ರಧಾನಿಗೆ ಸುಗಮ ಸಂಚಾರ ಒದಗಿಸುವಲ್ಲಿ ಪಂಜಾಬ್ ವಿಫಲಗೊಂಡಿರುವ ನಿಮಗೆ ಅಧಿಕಾರ ನಡೆಸಲು ಅರ್ಹತೆ ಇಲ್ಲ ಎಂದಿದ್ದಾರೆ. ಜೊತೆಗೆ ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.