ಕರ್ನಾಟಕ

karnataka

ETV Bharat / bharat

ಮೋದಿ ಬಾಂಗ್ಲಾಗೆ ಪ್ರಯಾಣಿಸಿದ ವಿಮಾನದಲ್ಲಿದೆ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ - ಏರ್ ಇಂಡಿಯಾ ಒನ್ - ಬೋಯಿಂಗ್ 777 ವಿಮಾನ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಅತ್ಯಾಧುನಿಕ ಏರ್ ಇಂಡಿಯಾ ಒನ್ - ಬೋಯಿಂಗ್ 777 ವಿಶೇಷ ವಿಮಾನದಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ವಿಮಾನವನ್ನು ಅಮೆರಿಕ ಭಾರತಕ್ಕೆ ನೀಡಿತ್ತು.

Bangladesh visit: PM uses new VVIP aircraft for 1st time on foreign trip
ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿ ಹೊಸ ಜೆಟ್ ಬಳಕೆ

By

Published : Mar 26, 2021, 3:08 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಪ್ರವಾಸ ಹಮ್ಮಿಕೊಂಡಿದ್ದು, ನೂತನ ಅತ್ಯಾಧುನಿಕ ಅತಿಗಣ್ಯರ ಜೆಟ್‌ನಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿದರು.

ಎರಡು ದಿನಗಳ ಬಾಂಗ್ಲಾ ಪ್ರವಾಸದಲ್ಲಿ ಮೋದಿ ದೆಹಲಿಯಿಂದ ಢಾಕಾಕ್ಕೆ ಪ್ರಯಾಣಿಸಿದ್ದಾರೆ. ಉಭಯ ದೇಶಗಳು ಪ್ರಸ್ತುತ 1971 ರ ಯುದ್ಧ ವಿಜಯದ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡುತ್ತಿವೆ. ಭಾರತದ ಸೇನೆಯು 1971 ರ ಡಿಸೆಂಬರ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿತ್ತು. ಈ ಮೂಲಕ ಬಾಂಗ್ಲಾ ವಿಮೋಚನೆಯಾಗಿ ಹೊಸ ದೇಶದ ಉದಯವಾಗಿತ್ತು.

ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿ ಹೊಸ ಜೆಟ್ ಬಳಕೆ

ವಿಶೇಷವಾಗಿ ಕಸ್ಟಮೈಸ್ ಮಾಡಲಾದ ಬಿ 777 ವಿಮಾನವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೋಯಿಂಗ್ ಭಾರತ ಸರ್ಕಾರಕ್ಕೆ ನೀಡಿದೆ. ಈ ಏರ್ ಇಂಡಿಯಾ ಒನ್ ವಿಮಾನ ಬೆಳಿಗ್ಗೆ 8 ರ ಸುಮಾರಿಗೆ ದೆಹಲಿಯಿಂದ ಹೊರಟು ಬೆಳಿಗ್ಗೆ 10.30 ಕ್ಕೆ ಢಾಕಾ ವಿಮಾನ ನಿಲ್ದಾಣಕ್ಕೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಂದಾಯಿತ ಸಂಖ್ಯೆ ವಿಟಿ-ಎಎಲ್​ಟಿ ಜೊತೆಗೆ ಮತ್ತೊಂದು ಬಿ 777 ವಿಮಾನವನ್ನು ಅಮೆರಿಕದ ವಿಮಾನ ನಿರ್ಮಾಣ ದೈತ್ಯ ಬೋಯಿಂಗ್ ಕಂಪನಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದೆ. ಈ ಎರಡೂ ವಿಮಾನಗಳು ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಸೇವೆಗೆ ಮೀಸಲಿವೆ.

ಈ ವಿಮಾನವು 2018 ರಲ್ಲಿ ಕೆಲವು ತಿಂಗಳುಗಳ ಕಾಲ ಏರ್ ಇಂಡಿಯಾದ ವಾಣಿಜ್ಯ ನೌಕೆಯ ಭಾಗವಾಗಿತ್ತು. ನಂತರ ವಿವಿಐಪಿ ಪ್ರಯಾಣಕ್ಕಾಗಿ ರೆಟ್ರೊಫಿಟಿಂಗ್​ಗಾಗಿ ಬೋಯಿಂಗ್‌ಗೆ ಕಳುಹಿಸಲಾಗಿದೆ. ಈ B777 ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ.

ABOUT THE AUTHOR

...view details